KARBWWB Recruitment 2023: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಕೂಡಲೇ ಅರ್ಜಿ ಸಲ್ಲಿಸಿ

ಬೆಂಗಳೂರು, ಜುಲೈ 19: ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು (KARBWWB) ತನ್ನಲ್ಲಿ ಖಾಲಿ ಇರುವ ವಿವಿದ ಹುದ್ದೆಗಳ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಮೊದಲು ಅರ್ಜಿ ಸಲ್ಲಿಕೆ ದಿನಾಂಕವನ್ನು ಜುಲೈ 22 ಎಂದು ನಿಗದಿ ಮಾಡಲಾಗಿತ್ತು, ಇದೀಗ ಆ ದಿನಾಂಕವನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ. ಜುಲೈ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಲಿ ಇರುವ ಒಟ್ಟು 186 ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್, ಫೀಲ್ಡ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕರ್ನಾಟಕ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಬಯಸುವವರಿಗೆ ಈ ನೇಮಕಾತಿಯ ಪ್ರಯೋಜನ ಪಡೆಯಬೇಕು ಎಂದು ಅಧಿಸೂಚನೆ ತಿಳಿಸಿದೆ.

KARBWWB Recruitment 2023

ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ (KEA) ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿದ ನಂತರ ಅರ್ಹರಿಗೆ ಪ್ರಾಧಿಕಾರವೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಅರ್ಜಿ ಸಲ್ಲಿಕೆ ಮುನ್ನ ಹುದ್ದೆ, ವಿದ್ಯಾರ್ಹತೆ, ವೇತನ ಇನ್ನಿತರ ಮಾಹಿತಿ ತಿಳಿಯಿರಿ.

ಹುದ್ದೆಗಳ ವಿವರ

ಹುದ್ದೆ ಹೆಸರು- ಕೆಂಡ್ ಡಿವಿಷನ್ ಅಸಿಸ್ಟೆಂಟ್, ಫೀಲ್ಡ್ ಇನ್ಸ್ ಪೆಕ್ಟರ್

ಒಟ್ಟು ಖಾಲಿ ಹುದ್ದೆಗಳು - 186

ಮಾಸಿಕ ವೇತನ -₹37,900 ನಿಂದ ₹70,850.

ಉದ್ಯೋಗದ ಸ್ಥಳ - ಕರ್ನಾಟಕ

ಯಾವ ಹುದ್ದೆಗಳು ಎಷ್ಟಿವೆ?

ಫಸ್ಟ್ ಡಿವಿಷನ್ ಅಸಿಸ್ಟೆಂಟ್ (FDA)- 12

ಖಾಸಗಿ ಕನ್ಸಲ್ಟೆಂಟ್- 2

ಸೆಕೆಂಡ್ ಡಿವಿಷನ್ ಸಹಾಯಕ (SDA)- 100

ವೆಲ್ಫೇರ್ ಆಫೀಸರ್- 12

ಫೀಲ್ಡ್ ಇನ್ಸ್ ಪೆಕ್ಟರ್- 60

KARBWWB Recruitment 2023

ಮಾಸಿಕ ವೇತನ ವಿವರ

ಫಸ್ಟ್ ಡಿವಿಷನ್ ಅಸಿಸ್ಟೆಂಟ್ (FDA)- ರೂ.27,650 ನಿಂದ 52,650 ರೂಪಾಯಿ.

ಖಾಸಗಿ ಕನ್ಸಲ್ಟೆಂಟ್- ರೂ.27,650 ನಿಂದ 52,650 ರೂಪಾಯಿ.

ಸೆಕೆಂಡ್ ಡಿವಿಷನ್ ಸಹಾಯಕ (SDA)- ರೂ.21,400-42,000 ರೂಪಾಯಿ.

ವೆಲ್ಫೇರ್ ಆಫೀಸರ್- ರೂ.37,900 ದಿಂದ 70,850 ರೂಪಾಯಿ.

ಫೀಲ್ಡ್ ಇನ್ಸ್ ಪೆಕ್ಟರ್- ರೂ. 33,450 ನಿಂದ 62,600 ರೂಪಾಯಿ.

ಅಭ್ಯರ್ಥಿಗಳೀಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಇನ್ನಿತರ ಮಾಹಿತಿಗಾಗಿ ಆಸಕ್ತರು ಅಧಿಸೂಚನೆ ವೀಕ್ಷಿಸಬೇಕು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ https://cetonline.karnataka.gov.in/kea/karrec23 ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+