ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು: ವಾಕ್ ಇನ್ ಸಂದರ್ಶನ
ಮೈಸೂರು, ಜುಲೈ 15: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ 2022-23ರ ಶೈಕ್ಷಣಿಕ ಅವಧಿಗೆ ಒಪ್ಪಂದದ ಆಧಾರದ ಮೇಲೆ ವಿವಿದ ಹುದ್ದೆಗಳಿಗೆ ವಾಕ್-ಇನ್-ಇಂಟರ್ವ್ಯೂಗೆ ಕರೆ ನೀಡಲಾಗಿದೆ. ಒಟ್ಟು 11 ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.
ಈ ಸಂಬಂಧ ಕಚೇರಿಯು ಅಧಿಸೂಚನೆ ಹೊರಡಿಸಿದೆ. ಉದ್ಯೋಗಾಕಾಂಕ್ಷಿಗಳಿಗೆ ಜುಲೈ 21 ರಂದು ಸಂಸ್ಥೆಯ ಪ್ರಾಂಶುಪಾಲರ ಕಚೇರಿಯಲ್ಲಿ ನೇರ ಸಂದರ್ಶನ ಮತ್ತು ಆಯ್ಕೆ ನಡೆಯಲಿದೆ.
ಹುದ್ದೆಯ ವಿವರಗಳು ಹೀಗಿವೆ:
1. ರಸಾಯನಶಾಸ್ತ್ರ ಪ್ರೊಫೆಸರ್ (ಭೌತಿಕ ರಸಾಯನಶಾಸ್ತ್ರ): ಒಂದು ಹುದ್ದೆ ಖಾಲಿಯಿದ್ದು, 70 ವರ್ಷ ಒಳಗಿನ, ಪಿಎಚ್ಡಿ ಪದವಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನಿಷ್ಠ ಹತ್ತು ವರ್ಷಗಳ ಬೋಧನಾ ಅನುಭವವಿರಬೇಕು. ಪ್ರೊಫೆಸರ್ ಆಗಿ 3 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ ನಿವೃತ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಿಂಗಳಿಗೆ 1 ಲಕ್ಷ ರೂಪಾಯಿ ವೇತನ.

2. ಸಹಾಯಕ ಪ್ರಾಧ್ಯಾಪಕ (ಶಿಕ್ಷಣಶಾಸ್ತ್ರ): ಭೌತಶಾಸ್ತ್ರದಲ್ಲಿ ಎಂಎಸ್ಸಿ ಮತ್ತು M.Ed ಮುಗಿಸಿರುವ, NET/SLET/M.Phil./Ph.D ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಪ್ರತಿ ತಿಂಗಳು 45,000 ರೂಪಾಯಿ ವೇತನವಿದೆ. ಒಂದು ಹುದ್ದೆಯಿದೆ.
3. ಸಹಾಯಕ ಪ್ರಾಧ್ಯಾಪಕ (ಇತಿಹಾಸ): ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ NET / KSET / M. Phil / Ph.D ಅರ್ಹತೆ ಹೊಂದಿರುವ ಅಭ್ಯರ್ಥಿ ಸಂದರ್ಶನಕ್ಕೆ ಹಾಜರಾಗಬಹುದು. ಪ್ರತಿ ತಿಂಗಳು 45,000 ರೂಪಾಯಿ ವೇತನವಿದೆ. ಒಂದು ಹುದ್ದೆಯಿದೆ.
4. ವೈದ್ಯಕೀಯ ಅಧಿಕಾರಿ (ಅರೆಕಾಲಿಕ): ಎರಡು ಹುದ್ದೆಗಳಿವೆ. ಪುರುಷ ಮತ್ತು ಮಹಿಳೆಗೆ ಒಂದೊಂದು ಹುದ್ದೆ ಮೀಸಲಾಗಿವೆ. ಎಂಬಿಬಿಎಸ್ ಮುಗಿಸಿರುವ ಕನಿಷ್ಠ ಮೂರು ವರ್ಷಗಳ ಅನುಭವವಿರುವ ನೋಂದಾಯಿತ ವೈದ್ಯಕೀಯ ವೃತ್ತಿದಾರರಿಗೆ ಅವಕಾಶ. ತಿಂಗಳಿಗೆ 25,000 ವೇತನ. ವಯಸ್ಸಿನ ಮಿತಿ 65 ವರ್ಷ.
5. ಸಹಾಯಕ ಪ್ರಾಧ್ಯಾಪಕರು (ಭೌತಶಾಸ್ತ್ರ): ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ NET / KSET / M. Phil / Ph.D ಅರ್ಹತೆ ಹೊಂದಿರುವ ಸಂದರ್ಶನಕ್ಕೆ ಹಾಜರಾಗಬಹುದು. ಪ್ರತಿ ತಿಂಗಳು 45,000 ರೂಪಾಯಿ ವೇತನವಿದೆ. ಒಂದು ಹುದ್ದೆಯಿದೆ. UGC / NCERT / GOI ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯಿದೆ.
6.ತರಬೇತಿ ಪಡೆದ ಪದವೀಧರ ಶಿಕ್ಷಕ (ಟಿಜಿಟಿ) - ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ. ಇಂಗ್ಲಿಷ್‌ನಲ್ಲಿ ಬೋಧನೆಯಲ್ಲಿ ಪ್ರಾವೀಣ್ಯತೆ. ಕಂಪ್ಯೂಟರ್ ಅಪ್ಲಿಕೇಶನ್‌ಗಳ ಜ್ಞಾನ ಇರಬೇಕು. 26,250 ರೂಪಾಯಿ ವೇತನವಿದ್ದು, ವಯಸ್ಸಿನ ಮಿತಿ 35 ವರ್ಷ.
7. ಸಲಹೆಗಾರರು: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ. ಆಡಳಿತ ಕ್ಷೇತ್ರದಲ್ಲಿ ಹೆಚ್ಚು ಅನುಭವವಿರುವವರು. RTI ಪ್ರಕರಣಗಳನ್ನು ಒಳಗೊಂಡಿರುವ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿವಳಿಕೆ. ವಯಸ್ಸಿನ ಮಿತಿ 65 ವರ್ಷವಿದ್ದು, ತಿಂಗಳಿಗೆ 29,000 ವೇತನವಿದೆ.
8. ತಂತ್ರಜ್ಞ ಗ್ರೇಡ್ I: 10ನೇ / 12ನೇ ತೇರ್ಗಡೆಯಾಗಿರುವ ಅಭ್ಯರ್ಥಿ. ಮೂರು ವರ್ಷಗಳ ಸಂಬಂಧಿತ ಕ್ಷೇತ್ರದಲ್ಲಿ ಅನುಭವವಿರುವವರು ಅರ್ಜಿ ಸಲ್ಲಿಸಬಹುದು. ರೂ. 19,000 ವೇತನವಿದ್ದು, ವಯಸ್ಸಿನ ಮಿತಿ 27 ವರ್ಷ ಎಂದು ನಿಗದಿಗೊಳಿಸಲಾಗಿದೆ.
9. ಪ್ರಯೋಗಾಲಯ ಸಹಾಯಕ: 50% ಅಂಕಗಳೊಂದಿಗೆ ಮನೋವಿಜ್ಞಾನದಲ್ಲಿ M. A / M. Sc ಪದವಿ ಪಡೆದಿರಬೇಕು. 17,000 ಪ್ರತಿ ತಿಂಗಳು ವೇತನ. ವಯಸ್ಸಿನ ಮಿತಿ 30 ವರ್ಷ.
10. ಜೂನಿಯರ್ ಪ್ರಾಜೆಕ್ಟ್ ಫೆಲೋ: ಇಂಗ್ಲಿಷ್/ಶಿಕ್ಷಣ/ ಸಮಾಜ ವಿಜ್ಞಾನ/ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ. NET ಅರ್ಹತೆ ಇರುವವರಿಗೆ ರೂ. 25,000, NET ಮುಗಿಸದಿರುವವರಿಗೆ ರೂ. 23,000 ವೇತನವಿದೆ. ಯುಜಿಸಿ ಮಾರ್ಗಸೂಚಿಗಳ ಪ್ರಕಾರ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
11. ಕೋರ್ಸ್ ನಿರ್ವಾಹಕರು: ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ಕಂಪ್ಯೂಟರ್ ಜ್ಞಾನ ಮತ್ತು ಕೆಲಸ ಮಾಡಿದ ಅನುಭವ. ಯುಜಿಸಿ ಮಾರ್ಗಸೂಚಿಗಳ ಪ್ರಕಾರ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ರೂ. 25,000 ವೇತನವಿದೆ.
ದಾಖಲೆಗಳ ಪರಿಶೀಲನೆಯ ಉದ್ದೇಶಕ್ಕಾಗಿ ಸಂದರ್ಶನ ಪ್ರಾರಂಭವಾಗುವ ಒಂದು ಗಂಟೆ ಮೊದಲು ಅಭ್ಯರ್ಥಿಗಳು ಸಂಸ್ಥೆಗೆ ಭೇಟಿ ನೀಡಬೇಕು. ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಅವರು ಪ್ರತ್ಯೇಕ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಪರಿಶೀಲನಾ ಉದ್ದೇಶಕ್ಕಾಗಿ ಮೂಲ ಪ್ರಮಾಣಪತ್ರಗಳು ಕಡ್ಡಾಯವಾಗಿ ಸಲ್ಲಿಸಬೇಕು.
-
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications