ದಾವಣಗೆರೆ, ವಿಜಯಪುರದಲ್ಲಿ ಕೆಲಸ ಖಾಲಿ ಇದೆ, ವಿವರ
ವಿಜಯಪುರ, ಆಗಸ್ಟ್ 06: ವಿಜಯಪುರ ಮತ್ತು ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆಗಳ ಸಂಖ್ಯೆ, ಅನುಭವ, ವಿದ್ಯಾರ್ಹತೆ ಸೇರಿದಂತೆ ಇತರ ವಿವರಗಳನ್ನು ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಬಹುದು.
ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ಸಿದ್ಧೇಶ್ವರ ಮೆಡಿಕಲ್ಸ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ. ಸಿದ್ಧೇಶ್ವರ 24/7 ಮೆಡಿಕಲ್ಸ್ ಜಿಲ್ಲೆಯಾದ್ಯಂತ ಶಾಖೆಗಳನ್ನು ಸ್ಥಾಪಿಸುತ್ತಿದ್ದು, ಇಲ್ಲಿ ಕೆಲಸ ಮಾಡಲು ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ನೇಮಕಗೊಳ್ಳಲು ಬಯಸುವ ಅಭ್ಯರ್ಥಿಗಳು ತಮ್ಮಪೂರ್ಣ ಮಾಹಿತಿಯುಳ್ಳ ಸ್ವವಿವರವನ್ನು [email protected] ಮೇಲ್ ಕಳುಹಿಸಿ ನೇರವಾಗಿ ಭೇಟಿ ಮಾಡಿ ಸಂದರ್ಶನದಲ್ಲಿ ಪಾಲ್ಗೊಳ್ಳಿ. ನೇರ ಸಂದರ್ಶನ 12/8/2024 ಮತ್ತು 17/8/2024ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯ ತನಕ ನಡೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ESIC/ PF ಹಾಗೂ ಗ್ರಾಚ್ಯುಟಿ ಸೌಲಭ್ಯ ಒದಗಿಸಲಾಗುವುದು. ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯ ಸುರಕ್ಷಾ ಸೌಲಭ್ಯ ಸಹ ನೀಡಲಾಗುವುದು. ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅನುಭವ ಮಾತ್ರ ಪರಿಗಣಿಸಲಾಗುವುದು. ಯಾವುದೇ ತರಹದ ಪ್ರಭಾವಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಹುದ್ದೆಗಳು: ಫಾರ್ಮಸಿಸ್ಟ್ 25 ಹುದ್ದೆಗಳು. ಬಿ.ಫಾರ್ಮಾ, ಡಿ. ಫಾರ್ಮಾ, ಅನುಭವ 0 ದಿಂದ 5 ವರ್ಷಗಳು. ಸಹಾಯಕ ಫಾರ್ಮಸಿಸ್ಟ್ 20 ಹುದ್ದೆಗಳು. ಬಿ.ಫಾರ್ಮಾ, ಡಿ.ಫಾರ್ಮಾ. ಅನುಭವ 0 ದಿಂದ 5ವರ್ಷಗಳು. ಡೆಲಿವರಿ ಬಾಯ್ಸ್ 20 ಹುದ್ದೆಗಳು. ಯಾವುದೇ ವಿದ್ಯಾರ್ಹತೆ. ಅನುಭವ 0 ದಿಂದ 5ವರ್ಷಗಳು.
ನೇರ ಸಂದರ್ಶನ ನಡೆಯುವ ವಿಳಾಸ, ಜೆ.ಎಸ್.ಎಸ್. ಹಾಸ್ಪಿಟಲ್, ಎನ್. ಎಚ್-50, ಎಸ್-ಹೈಪರ್ ಮಾರ್ಟ್ ಹತ್ತಿರ, ವಿಜಯಪುರ.
ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ: ದಾವಣಗೆರೆ ತಾಲೂಕು ಆನಗೋಡು ಹೋಬಳಿಯ ಆಲೂರು ವೃತ್ತದ ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್ 20 ರೊಳಗಾಗಿ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿದಾರರು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರ, ಚುನಾವಣೆ ಗುರುತಿನ ಚೀಟಿ, ಪಡಿತರ ಚೀಟಿ, ವ್ಯಾಸಂಗ ಪೂರೈಸಿದ ಬಗ್ಗೆ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸ್ವಯಂ ಘೋಷಣಾ ಪತ್ರ, ವಂಶವೃಕ್ಷ, ಒಪ್ಪಿಗೆ ಪ್ರಮಾಣ ಪತ್ರ, ಚಾರಿತ್ಯದ ಬಗ್ಗೆ ಪೊಲೀಸ್ ವರದಿಯನ್ನು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 5 ಅಂಗನವಾಡಿ ಕಾರ್ಯಕರ್ತೆ ಮತ್ತು 21 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಗೌರವ ಸೇವೆಯ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ.
ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 9 ಕೊನೆಯ ದಿನ. ಅರ್ಜಿಯನ್ನು ವೆಬ್ ಸೈಟ್ http:88dwcd.karnataka.gov.in ಮತ್ತು http://karnemakaone.kar.nic.in/abcd/ ಮೂಲಕ ಸಲ್ಲಿಸಬಹುದು.












Click it and Unblock the Notifications