ಬೆಂಗಳೂರಲ್ಲಿ ಕೆಲಸ; ಅಕ್ಟೋಬರ್ 15ರಂದು ನೇರ ಸಂದರ್ಶನ
ಬೆಂಗಳೂರು, ಅಕ್ಟೋಬರ್ 12 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ಅಕ್ಟೋಬರ್ 15ರಂದು ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ. ಒಟ್ಟು 7 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ.
ಆಶಾ ಸೂಪರ್ ವೈಸರ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.
ಜಿಲ್ಲಾ ದತ್ತಾಂಶ ವ್ಯವಸ್ಥಾಪಕ 1, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ 1, ಡಿ.ಇ.ಐ.ಸಿ. ವ್ಯವಸ್ಥಾಪಕರು 1, ತಾಲೂಕು ಆಶಾ ಮೇಲ್ವಿಚಾರಕರು 3, ಲೆಕ್ಕಪತ್ರ ಸಹಾಯಕರು 1 ಸೇರಿ 7 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಸ್ನಾತಕೋತ್ತರ ಪದವಿ/ ಬಿಬಿಎಂ/ ಎಂಬಿಎ/ ಜೆ.ಎನ್.ಎಂ/ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ಇನ್ ನರ್ಸಿಂಗ್/ ಆಯುಷ್ ಕೋರ್ಸ್ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಕನಿಷ್ಠ ವಯೋಮಿತಿ 40, ಗರಿಷ್ಟ 50 ವರ್ಷಗಳು.
ವೇತನದ ವಿವರ : ಜಿಲ್ಲಾ ದತ್ತಾಂಶ ವ್ಯವಸ್ಥಾಪಕ 22,050 ರೂ.ಗಳು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ 15750 ರೂ.ಗಳು. ಡಿ.ಇ.ಐ.ಸಿ. ವ್ಯವಸ್ಥಾಪಕರು 15,750 ರೂ.ಗಳು. ತಾಲೂಕು ಆಶಾ ಮೇಲ್ವಿಚಾರಕರು 10,500 ರೂ.ಗಳು. ಲೆಕ್ಕಪತ್ರ ಸಹಾಯಕರು 13,650 ರೂ.ಗಳು.
ಅಭ್ಯರ್ಥಿಗಳು ಅಕ್ಟೋಬರ್ 15ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಗತ್ಯ ದಾಖಲೆಗಳು, 1 ಸೆಟ್ ಝೆರಾಕ್ಸ್ ಪ್ರತಿಗಳನ್ನು ಸಂದರ್ಶನಕ್ಕೆ ಬರುವಾಗ ತರಬೇಕು.
ವಿಳಾಸ : ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆವರಣ, ಹಳೇ ಟಿ. ಬಿ. ಆಸ್ಪತ್ರೆ, ಇಂದಿರಾ ನಗರ, ಬೆಂಗಳೂರು 38.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್












Click it and Unblock the Notifications