ಕಲಬುರಗಿ, ಬಳ್ಳಾರಿ ಉದ್ಯೋಗ ಮಾಹಿತಿ; ಮಾ.28ರಂದು ನೇರ ಸಂದರ್ಶನ
ಕಲಬುರಗಿ, ಮಾರ್ಚ್ 26; ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಯ ಉದ್ಯೋಗ ಮಾಹಿತಿಗಳು. ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 28ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಅಗ್ನಿವೀರ ವಾಯು ಹುದ್ದೆ, ಉಚಿತ ನರ್ಸಿಂಗ್ ತರಬೇತಿಗೆ ನೋಂದಣಿ ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಗೆ ಕರೆ ನೀಡಲಾಗಿದೆ.
ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 28ರ ಮಂಗಳವಾರ, ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳಿಗೆ ವಯೋಮಿತಿ 25 ರಿಂದ 35 ವರ್ಷಗಳು.

ನೇರ ಸಂದರ್ಶನದಲ್ಲಿ ಕಲಬುರಗಿಯ ಎಸ್‌ಬಿಐ ಲೈಫ್ ಇನ್ಸುರೆನ್ಸ್ ಯೂನಿಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 25 ರಿಂದ 35 ವರ್ಷದೊಳಗಿರಬೇಕು. ಲೈಫ್ ಮಿತ್ರಾ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 30 ರಿಂದ 60 ವರ್ಷದೊಳಗಿರಬೇಕು.
ಮಠ ಮಲ್ಟಿ ಮೈಂಡ್ಸ್‍ದಲ್ಲಿ ಟೇಲಿ ಕಾಲರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳು ಪಿಯುಸಿ ಅಥವ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಎ. ಬಿ. ಪವರ್ ಸಿಸ್ಟಮ್‍ದಲ್ಲಿ ಎಫ್.ಎಸ್.ಇ. ಕೋ-ಆರ್ಡಿನೇಟರ್ ಹುದ್ದೆಗೆ ಪಿಯುಸಿ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30ವರ್ಷದೊಳಗಿರಬೇಕು. ಎಫ್.ಎಸ್.ಇ. (ಫೀಲ್ಡ್ ಸರ್ವೀಸ್ ಇಂಜಿನಿಯರಿಂಗ್) ಹುದ್ದೆಗೆ ಐಟಿಐ (ಎಲ್ಲಾ ಟ್ರೇಡ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಜೆರಾಕ್ಸ್, ರೆಸ್ಯೂಮ್, ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಈ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ 08472-274846 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಅಗ್ನಿವೀರ ವಾಯು ಹುದ್ದೆಗೆ ನೋಂದಣಿ; ಭಾರತೀಯ ವಾಯುಪಡೆಯ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳಿಗೆ ವಿದ್ಯಾರ್ಹತೆಯು ದ್ವಿತೀಯ ಪಿಯುಸಿ. ಶೇ. 50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವಯೋಮಿತಿಯು ಅಭ್ಯರ್ಥಿಗಳು 2002 ಡಿಸೆಂಬರ್ 26 ರಿಂದ 2006 ಜೂನ್ 26ರ ನಡುವೆ ಜನಿಸಿರಬೇಕು. ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಕೊನೆಯ ದಿನ ಮಾರ್ಚ್ 31 ಆಗಿರುತ್ತದೆ. ಆನ್‍ಲೈನ್ ನೋಂದಣಿಗಾಗಿ https://agnipathvayu.cdac.in ಲಿಂಕ್ ಬಳಸಬಹುದಾಗಿದೆ. ಆನ್‍ಲೈನ್ ಪರೀಕ್ಷೆಯು ಮೇ ತಿಂಗಳಿನಲ್ಲಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ 08392-273988 ಸಂಖ್ಯೆಗೆ ಕರೆ ಮಾಡಿ ಅಥವ https://careerindianairforce.cdac.in ವೆಬ್‍ಸೈಟ್‍ಗೆ ಭೇಟಿ ನೀಡಿ.
ಉಚಿತ ನರ್ಸಿಂಗ್ ತರಬೇತಿ; ಕೌಶಲ್ಯ ಅಭಿವೃದ್ಧಿ ಕಚೇರಿಯಿಂದ ದಿ ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಸಂಸ್ಥೆಯು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ, ಮನೆ ಮತ್ತು ಆಸ್ಪತ್ರೆ ಆರೈಕೆ ಮಾಡುವವರಿಗೆ ಉಚಿತ ನರ್ಸಿಂಗ್ ತರಬೇತಿ ಮತ್ತು ಉದ್ಯೋಗ ಕಲ್ಪಿಸಿಕೊಡಲು ಅರ್ಹ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 50 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಮೊದಲು ಬಂದವರಿಗೆ ಆದ್ಯತೆ ಇರುತ್ತದೆ. ತರಬೇತಿಯಲ್ಲಿ 30 ದಿನಗಳ ಪಠ್ಯ ಮತ್ತು 60 ದಿನಗಳ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳ ವಯೋಮಿತಿ 18-42 ವರ್ಷಗಳು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು, ಸರಳ ಇಂಗ್ಲಿಷ್ ಬರಬೇಕು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ನಗರದ ಎಸ್. ಪಿ. ವೃತ್ತ, ಪಾರ್ವತಿನಗರದ ಬಸವಭವನ ರಸ್ತೆಯ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 08392-27398 9019847029, 9964502514, 8073852104, 984444958.












Click it and Unblock the Notifications