ದಾವಣಗೆರೆಯಲ್ಲಿ ಮಿನಿ ಉದ್ಯೋಗ ಮೇಳ, ಬಳ್ಳಾರಿಯಲ್ಲಿ ತರಬೇತಿಗೆ ಅರ್ಜಿ ಆಹ್ವಾನ

ಬಳ್ಳಾರಿ/ಹೊಸಪೇಟೆ, ಆಗಸ್ಟ್ 13: ಮರಿಯಮ್ಮನ ಹಳ್ಳಿಯ ಸರ್ಕಾರಿ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್‌ನ 2021-22 ನೇ ಸಾಲಿನ ಡಿಪ್ಲೊಮಾ ಇನ್ ಟೂಲ್ ಅಂಡ್ ಮೇಕಿಂಗ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸೆಂಟರ್‌ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಅರ್ಜಿಗಳನ್ನು ಪ್ರಾಂಶುಪಾಲರಿAದ ಖುದ್ದಾಗಿ ನಗದು ಅಥವಾ ಅಂಚೆ ಮೂಲಕ ಕ್ರಾಸ್ ಮಾಡಿದ ರೂ.250 ಡ್ರಾಫ್ಟ್ (ಎಸ್.ಸಿ./ಎಸ್.ಟಿ ಮತ್ತು ವರ್ಗ-1 ವಿದ್ಯಾರ್ಥಿಗಳಿಗೆ ರೂ.125 ಮಾತ್ರ) ಸಲ್ಲಿಸಿ ಪಡೆಯಬಹುದು. ಅರ್ಜಿಯನ್ನು ಪಡೆಯಲು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಜಿ.ಟಿ.ಟಿ.ಸಿ ಹೊಸಪೇಟೆ ಮರಿಯಮ್ಮನಹಳ್ಳಿ ವಿಳಾಸಕ್ಕೆ ಸಲ್ಲಿಸಿ.

ಹೆಚ್ಚಿನ ಮಹಿತಿಗಾಗಿ ಪ್ರಾಚಾರ್ಯರು Govt Tool Room and Training Centre Harihara Road Mariyammana halli Hosapete-583222ಗೆ ಖುದ್ದಾಗಿ ಅಥವಾ ದೂ.ಸಂ:8073979750, ಮೊ.ಸಂ:99023 97658 ಗೆ ಸಂಪರ್ಕಿಸಬಹುದು.
***

ಡಿ.ಇಎಲ್.ಡಿ (ಟಿಸಿಹೆಚ್) ಕೋರ್ಸ್‌ಗೆ ಅರ್ಜಿ ಆಹ್ವಾನ

ದಾವಣಗೆರೆ, ಆ.13: ಕೇಂದ್ರಿಕೃತ ದಾಖಲಾತಿ ಘಟಕ, ಬೆಂಗಳೂರು ಇವರ ವತಿಯಿಂದ ಪ್ರಸಕ್ತ ಸಾಲಿನ ಡಿ.ಇಎಲ್.ಡಿ (ಟಿಸಿಎಚ್) ಕೋರ್ಸ್ ದಾಖಲಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ, ಶುಲ್ಕದ ಮಾಹಿತಿ, ಅರ್ಹತೆ, ಮೀಸಲಾತಿ ವಿವರ ಮತ್ತು ಇತರೆ ಮಾಹಿತಿಗಳನ್ನು www.schooleducation.kar.nic.in ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದು. ಅಲ್ಲದೆ ವೆಬ್‌ಸೈಟ್ ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ನಿಗದಿತ ದಾಖಲೆಗಳು ಮತ್ತು ಅರ್ಜಿ ಶುಲ್ಕ ಪಾವತಿಸಿದ ಡಿ.ಡಿ. ಯೊಂದಿಗೆ ನೋಡಲ್ ಕೇಂದ್ರವಾದ ಡಯಟ್, ದಾವಣಗೆರೆ ಇಲ್ಲಿ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು.

Job Fair, Training vacancies Ballari, Davanagere

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 98444 01092, 96202 71112, 08192-231156ಕ್ಕೆ ಸಂಪರ್ಕಿಸಬಹುದು ಎಂದು ಡಯಟ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಆಗಸ್ಟ್18 ಹಾಗೂ 27 ರಂದು ಮಿನಿ ಉದ್ಯೋಗ ಮೇಳ

ದಾವಣಗೆರೆ, ಆ.13: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಬೆಂಗಳೂರು ಇವರ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆ.18 ಹಾಗೂ ಆ.27 ರಂದು ಆಯೋಜಿಸಲಾಗಿದೆ.

ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಗ್ರಿ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರು ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು Google Form Link (QR Code) https://tinyurl.com/3xm58caw ನಲ್ಲಿ ಮಾಹಿತಿಯನ್ನು ಭರ್ತಿಗೊಳಿಸಿ, ನೋಂದಾಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 08192-259447 ಅಥವಾ 78929 56667, ಇ-ಮೇಲ್: [email protected] ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಏಕನಾಥ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

****
ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ಗೆ ಅರ್ಜಿ ಆಹ್ವಾನ

ದಾವಣಗೆರೆ, ಆ.13: ಹರಿಹರ ತಾಲ್ಲೂಕಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ 3+1 ವರ್ಷಗಳ ಅವಧಿಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಸರ್ಕಾರ ಮತ್ತು ಎಐಟಿಯುಸಿ ವತಿಯಿಂದ ಅನುಮೋದಿಸಲ್ಪಟ್ಟಿರುವ ಈ ಕೋರ್ಸ್‍ಗೆ ಅರ್ಜಿ ಸಲ್ಲಿಸುವವರು ರಾಜ್ಯದಲ್ಲಿ ಕನಿಷ್ಠ 5 ವರ್ಷ ವ್ಯಾಸಂಗ ಮಾಡಿರಬೇಕು. ಹಾಗೂ ಮೆರಿಟ್-ಕಂ-ರೋಸ್ಟರ್ ಪದ್ದತಿ ಮೂಲಕ ಶೇಕಡ 30 ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗಾಗಿ ಕಾದಿರಿಸಲಾಗಿದೆ.

2 ವರ್ಷದ ಐ.ಟಿ.ಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಎಐಸಿಟಿಇ ಅಥವಾ ಡಿಟಿಇ ನಿಯಮದ ಪ್ರಕಾರ 2ನೇ ವರ್ಷದ ಡಿಪ್ಲೋಮಾ ತರಬೇತಿಗಳಿಗೆ ನೇರ ಪ್ರವೇಶ ಕಲ್ಪಿಸಲಾಗುವುದು.

ತರಬೇತಿಯಲ್ಲಿ ವಿಶೇಷವಾಗಿ ಸುಸಜ್ಜಿತ ಮೂಲಸೌಕರ್ಯಗಳು, ಆಧುನಿಕ ಹೈಟೆಕ್ ಯಂತ್ರೋಪಕರಣಗಳು, ಪ್ರಾಕ್ಟಿಕಲ್ ಇಂಟೆಗ್ರೇಟೆಡ್ ಆನ್‍ಜಾಬ್ ತರಬೇತಿ, ಅನುಭವಿ ತರಬೇತುದಾರರು ಹಾಗೂ ಪ್ಲೇಸ್‍ಮೆಂಟ್ ಸಹಯೋಗ ಒದಗಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹರಿಹರ ತಾಲ್ಲೂಕು ಹರ್ಲಾಪುರ ಗ್ರಾಮ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಸಮೀಪ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ, 22 ಸಿ ಅಂಡ್ ಡಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು
(ಮೊ.ಸಂಖ್ಯೆ-8711913947/ 9845941245) ಅಥವಾ (ದೂ.ಸಂಖ್ಯೆ-08192-243937/ 296840) ಹಾಗೂ ಇ-ಮೇಲ್: www.karunadu.karnataka.gov.in/gttc or www.gttc.co.in ಗೆ ಸಂಪರ್ಕಿಸಬಹುದು.
***

ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ, ಆ.13: 2021-22ನೇ ಶೈಕ್ಷಣಿಕ ಅವಧಿಯ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

44 ಜನ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯ ಪ್ರಕಾರ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು 1 ಸಾವಿರದಿಂದ 1,200 ರೂ. ವರೆಗೆ ಶಿಷ್ಯವೇತನ ಮತ್ತು ವಸತಿ ನಿಲಯ ಸೌಲಭ್ಯವನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜು.1ಕ್ಕೆ ಅನ್ವಯವಾಗುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 15 ರಿಂದ 23 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು 15 ರಿಂದ 25ರ ವಯೋಮಾನದವರಾಗಿರಬೇಕು. ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕ್ರೋಢೀಕೃತ ಅಂಕಗಳು ಮೆರಿಟ್ ಲೆಕ್ಕಾಚಾರಕ್ಕೆ ಆಧಾರವಾಗಿರುತ್ತದೆ.

ಡಿಪ್ಲೋಮಾ ಕೋರ್ಸ್ ಗಾಗಿ ಲಭ್ಯವಿರುವ ಸ್ಥಳಗಳು: ಗದಗದ ಬೆಟಗೇರಿಯ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 22, ತಮಿಳುನಾಡಿನ ಸೇಲಂನ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 17, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟಗಿರಿಯ ಎಸ್‌ಪಿಕೆಎಂ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 03, ಕೇರಳದ ಕಣ್ಣೂರಿನ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 02 ಅಭ್ಯರ್ಥಿಗಳು ಸೇರಿದಂತೆ ಒಟ್ಟು 44 ಜನರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯಾ ಡಿಪ್ಲೋಮಾ ಸಂಸ್ಥೆಗಳಲ್ಲಿ ಕೋರ್ಸ್ ಪ್ರವೇಶ ಕುರಿತಂತೆ ಕೌನ್ಸೆಲಿಂಗ್ ಕರೆಯಲಾಗುವುದು.

ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಫಾರಂ ಮತ್ತು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಫಾರಂಗಳಿಗಾಗಿ ದೂ:080-23561628/23566082/23568223 ಅಥವಾ ಉಪನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆಯ ಕಚೇರಿಯ ದೂ.ಸಂ:08392-266075 ಗೆ ಸಂಪರ್ಕಿಸಬಹುದು.

ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಆ.16ರೊಳಗೆ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ,ನರಸಾಪುರ,ಗದಗ-582102 ಸಲ್ಲಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+