ಹಾವೇರಿ; ರಾಣೆಬೆನ್ನೂರಿನಲ್ಲಿ ನ.10ರಂದು ಉದ್ಯೋಗ ಮೇಳ

ಹಾವೇರಿ, ನವೆಂಬರ್ 03 : ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನವೆಂಬರ್ 10ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. 50ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.

ಪಿ. ಕೆ. ಕೆ. ಇನಿಷಿಯೇಟಿವ್ಸ್, ರಾಣೆಬೆನ್ನೂರು ಮತ್ತು ಎಲ್. ಸಿ. ಸಿ. ಧಾರವಾಡ ಇವರ ಜಂಟಿ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ತನಕ ಉದ್ಯೋಗ ಮೇಳ ನಡೆಯಲಿದೆ.

ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವವರು ಆನ್‌ಲೈನ್ ಮತ್ತು ಖುದ್ದಾಗಿ ಕಚೇರಿಯಲ್ಲಿ ಫಾರ್ಮ್ ಪಡೆದು ನೋಂದಣಿ ಮಾಡಿಸಿಕೊಳ್ಳಬೇಕು. 50ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ.

Job Fair In Ranebennur On November 10

ಶಾಲೆ ತೊರೆದವರು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಜೆಓಸಿ, ಪದವೀಧರರು ಮೇಳದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9731568854 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರು ತಮ್ಮ ವ್ಯಕ್ತಿ ಪರಿಚಯ ಪತ್ರದ ಕನಿಷ್ಠ 5 ಪ್ರತಿಗಳನ್ನು ತರಬೇಕು. ವಿದ್ಯಾರ್ಹತೆ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಜೆರಾಕ್ಸ್ ಪ್ರತಿಗಳನ್ನು ತರಬೇಕು ಎಂದು ಸೂಚನೆ ನೀಡಲಾಗಿದೆ.

ಉದ್ಯೋಗ ಮೇಳ ನಡೆಯುವ ವಿಳಾಸ: 10/11/2019ರಂದು ಬೆಳಗ್ಗೆ 8 ರಿಂದ 5ರ ತನಕ ಉದ್ಯೋಗ ಮೇಳ ನಡೆಯಲಿದೆ. ಬಿ. ಕೆ. ಗುಪ್ತಾ ಹೈಸ್ಕೂಲ್, ರಾಣೆಬೆನ್ನೂರು.

ನೋಂದಣಿ ಫಾರ್ಮ್‌ಗಾಗಿ ಪಿ. ಕೆ. ಕೆ. ಇನಿಷಿಯೇಟಿವ್ಸ್, ಕೆ. ಬಿ. ಕೋಳಿವಾಡ ಗೃಹ ಕಚೇರಿ, ವಾಗೀಶ ನಗರ, 6ನೇ ಕ್ರಾಸ್, ರಾಣೆಬೆನ್ನೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+