ಕೊಪ್ಪಳದಲ್ಲಿ ಆ.20ರಂದು ಉದ್ಯೋಗ ಮೇಳ
ಕೊಪ್ಪಳ, ಆಗಸ್ಟ್ 13 : ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಗಸ್ಟ್ 20ರಂದು ಉದ್ಯೋಗ ಮೇಳವನ್ನು ಆಯೋಜಿಸಿದೆ. 18 ರಿಂದ 38 ವರ್ಷ ವಯೋಮಿತಿಯವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10.30 ರಿಂದ 2.30 ರವರೆಗೆ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳಕ್ಕೆ ಪ್ರವೇಶ ಉಚಿತ, ನೇರ ಸಂದರ್ಶನದ ಮೂಲಕ ವಿವಿಧ ಕಂಪನಿಗಳು ನೇಮಕಾತಿ ಮಾಡಿಕೊಳ್ಳಲಿವೆ.
ಉದ್ಯೋಗ ಮೇಳದಲ್ಲಿ ಸೀಮೆನ್ ಸ್ಟಾಫಿಂಗ್ ಸಲ್ಯೂಷನ್ಸ ಪ್ರೈ.ಲಿ. ಹುಬ್ಬಳ್ಳಿ, ಡಿಪ್‍ಸನ್ಸ್ ಸರ್ವಿಸ್ ಪ್ರೈ.ಲಿ. ಧಾರವಾಡ, ಪ್ರವೈಡರ್ ಪ್ರೈ.ಲಿ. ಬೆಂಗಳೂರು, ಐಸಿಐಸಿಐ ಬ್ಯಾಂಕ್ ಲಿ. ಬೆಂಗಳೂರು, ಎಜುಬ್ರಿಡ್ಜ್ ಪ್ರೈ.ಲಿ. ಶಿವಮೊಗ್ಗ, ನವಭಾರತ ಫರ್ಟಿಲೈಜರ್ಸ್ ಪ್ರೈ.ಲಿ. ಹುಬ್ಬಳ್ಳಿ ಹಾಗೂ ಹೋಂಡಾ ಎಸ್.ಬಿ.ಎಂ.ಎಸ್. ಪ್ರೈ.ಲಿ. ಬೆಂಗಳೂರು ಕಂಪನಿಗಳು ಪಾಲ್ಗೊಳ್ಳಲಿವೆ.

1 ನೇ ತರಗತಿಯಿಂದ ಎಸ್.ಎಸ್.ಎಲ್.ಸಿ, ಪಿಯುಸಿ, ಯಾವುದೇ ಪದವಿ, ಐ.ಟಿ.ಐ (ಎಲ್ಲಾ ಟ್ರೇಡ್‍ಗಳು), ಡಿಪ್ಲೊಮಾ (ಇ&ಸಿ, ಎಲೆಕ್ಟ್ರಿಷಿಯನ್, ಆಟೋಮೊಬೈಲ್ಸ್), ಬಿ.ಇ (ಇ&ಸಿ ಎಲೆಕ್ಟ್ರಿಷಿಯನ್, ಆಟೋಮೊಬೈಲ್ಸ್) ಯಾವುದೇ ಸ್ನಾತಕೋತ್ತರ ಪದವಿ, ಎಂ.ಬಿ.ಎ ಪದವಿ ಪಡೆದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಈ ಮೇಳದಲ್ಲಿ 18 ರಿಂದ 38 ವರ್ಷ ವಯೋಮಿತಿಯ ನಿರುದ್ಯೋಗಿ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ ಕಾರ್ಡ್ ಪ್ರತಿ, 4 ರಿಂದ 5 ಬಯೋಡಾಟಾ (ರೆಸ್ಯೂಮ್) ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ ಕೊಪ್ಪಳವನ್ನು ಸಂಪರ್ಕಿಸಬಹುದಾಗಿದೆ.











Click it and Unblock the Notifications