ಕಲಬುರಗಿ; ಶನಿವಾರ ಉದ್ಯೋಗ ಮೇಳ, ಭಾಗವಹಿಸುವ ಕಂಪನಿಗಳು

ಕಲಬುರಗಿ, ಜುಲೈ 14; ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜುಲೈ 15ರ ಶನಿವಾರ ಉದ್ಯೋಗ ಮೇಳ ನಡೆಯಲಿದೆ. ಆಸಕ್ತ ಮತ್ತು ಅರ್ಹರು ಪಾಲ್ಗೊಳ್ಳಬಹುದು. ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಶನಿವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Job Fair In Kalaburagi On July 15 List Of Companies Participating

ಈ ಉದ್ಯೋಗ ಮೇಳದಲ್ಲಿ ಲೀಡ್ ಅಸೋಸಿಯೇಟ್ಸ್ ಪ್ರೈ.ಲಿ. ಟೆಕ್ನಿಶಿಯನ್ ಹುದ್ದೆಗೆ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಯಾವುದೇ ಪದವಿ ಪಾಸಾಗಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ವಯೋಮಿತಿ 18 ರಿಂದ 28 ವರ್ಷಗಳು.

ಯಾವ-ಯಾವ ಕಂಪನಿಗಳು?; ಚಾನಲ್ಸ್ಪ್ಲೇ (ಏರ್‌ಟೆಲ್) ಬಿಜಿನೆಸ್ ಡೆವಲಪ್‌ವೇಂಟ್ ಆಫೀಸರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳು ಪಿ.ಯು.ಸಿ, ಐ.ಟಿ.ಐ., ಡಿಪ್ಲೋಮಾ, ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷಗಳು.

ಬೆಂಗಳೂರಿನ ರವಿ ಗ್ರಾಫಿಕ್ಸ್‌ನಲ್ಲಿ ಮಷಿನ್ ಆಪರೇಟರ್ ಹುದ್ದೆಗೆ ಐ.ಟಿ.ಐ, ಡಿಪ್ಲೋಮಾ/ ಬಿ.ಇ. ಮೆಕ್ಯಾನಿಕ್ ಪಾಸಾಗಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಫಿಡರ್ ಮ್ಯಾನ್ ಹುದ್ದೆಗೆ ಐ.ಟಿ.ಐ. ಪಾಸಾಗಿರುವ ಅಭ್ಯರ್ಥಿಗಳ ನೇಮಕವಾಗಲಿದೆ. ಗ್ರಾಫಿಕ್ಸ್ ಡಿಸೈನರ್ ಹುದ್ದೆಗೆ ಬಿ.ಇ., ಬಿ.ಟೆಕ್ ಮೆಕ್ಯಾನಿಕ್ ಪಾಸಾಗಿರುವ ಅಭ್ಯರ್ಥಿಗಳು ಹಾಗೂ ಅಕೌಂಟ್ಸ್ ಆಫೀಸರ್ ಅಡ್ಮಿನ್ ಹುದ್ದೆಗೆ ಬಿ.ಕಾಂ, ಬಿ.ಸಿ.ಎ. ಪಾಸಾಗಿರುವ ಅಭ್ಯರ್ಥಿಗಳ ನೇಮಕ ನಡೆಯಲಿದೆ. ವಯೋಮಿತಿ 18 ರಿಂದ 30 ವರ್ಷಗಳು.

ಮುತ್ತೂಟ್ ಫೈನಾನ್ಸ್ ಟ್ರೈನಿ ರಿಲೇಶನ್‌ಶಿಪ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರುವ ಅಭ್ಯರ್ಥಿ ಆಯ್ಕೆ ಮಾಡಲಿದೆ. ಫ್ಲಿಪ್‌ಕಾರ್ಟ್‌ ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಯಾವುದೇ ಪದವಿ ಪಾಸಾಗಿರುವ ಅಭ್ಯರ್ಥಿ ಆಯ್ಕೆ ಮಾಡಲಿದೆ.

ಕ್ಯಾಡ್‌ಮ್ಯಾಕ್ಸ್ ಸಲ್ಯೂಷನ್‌ದಲ್ಲಿ ಟೆಕ್ನಿಷಿಯನ್, ಡಿಸೈನ್ ಇಂಜಿನಿಯರ್ ಹುದ್ದೆಗೆ ಐ.ಟಿ.ಐ., ಡಿಪ್ಲೋಮಾ/ ಬಿ.ಇ. ಪಾಸಾದವರನ್ನು ನೇಮಕ ಮಾಡುತ್ತಿದೆ. ವಯೋಮಿತಿ 18 ರಿಂದ 30 ವರ್ಷಗಳು.

ಮ್ಯಾನ್‌ಪವರ್ ಗ್ರೂಪ್ ಸರ್ವಿಸ್ ಇಂಡಿಯಾ ಪ್ರೈ.ಲಿ. ಟೆಕ್ನಿಷಿಯನ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಯಾವುದೇ ಪದವಿ ಪಾಸಾಗಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ವಯೋಮಿತಿ 18 ರಿಂದ 28 ವರ್ಷಗಳು.

ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ವಿದ್ಯಾರ್ಹತೆಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-274846, 9620095270 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+