ಕಲಬುರಗಿ; ಆಗಸ್ಟ್ 16 ರಂದು ನೇರ ಸಂದರ್ಶನ

ಕಲಬುರಗಿ, ಆಗಸ್ಟ್ 14; ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಗಸ್ಟ್ 16 ರಂದು ನೇರ ಸಂದರ್ಶನ ಆಯೋಜಿಸಲಾಗಿದೆ. 20 ರಿಂದ 40 ವರ್ಷ ವಯೋಮಿತಿಯ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ತನಕ ನೇರ ಸಂದರ್ಶನ ನಡೆಯಲಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ನೇರ ಸಂದರ್ಶನದಲ್ಲಿ ಕಾಳಗಿಯ ಗಾಜರೆ ಎಜ್ಯುಕೇಷನ್ ಟ್ರಸ್ಟ್‌ನಲ್ಲಿ ಪ್ರೀ ಸ್ಕೂಲ್ ಟೀಚರ್, ಪ್ರೈಮರಿ ಇಂಗ್ಲೀಷ್ ಟೀಚರ್ ಹಾಗೂ ಇಂಗ್ಲೀಷ್ ಟ್ರೇನರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಯಾವುದೇ ಪದವಿ ಪಡೆದಿರಬೇಕು. ವಯೋಮಿತಿ 20 ರಿಂದ 40 ವರ್ಷಗಳು.

Job Fair In Kalaburagi On August 16th

ಕಲಬುರಗಿಯ ಶ್ರೀ ನಿಷ್ಠಿ ಪೈ. ಲಿ.ದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಯಾವುದೇ ಪದವೀಧರ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 30 ವರ್ಷದೊಳಗಿರಬೇಕು. 1 ರಿಂದ 2 ವರ್ಷದ ಅಟೋಮೊಬೈಲ್ ವಲಯದಲ್ಲಿ ಅನುಭವವಿರಬೇಕು.

ಅಕೌಂಟೆಂಟ್‌ ಹುದ್ದೆಗೆ ಅಭ್ಯರ್ಥಿಗಳು ಬಿ.ಕಾಂ/ ಎಂ.ಕಾಂ. (ಬೇಸಿಕ ಕಂಪ್ಯೂಟರ್, ಟ್ಯಾಲಿ) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 30ವರ್ಷದೊಳಗಿರಬೇಕು. ಒಂದು ವರ್ಷದ ಅನುಭವ ಹೊಂದಿರಬೇಕು.

ಟೆಕ್ನಿಷಿಯನ್ ಹುದ್ದೆಗೆ ಅಭ್ಯರ್ಥಿಗಳು ಐಟಿಐ/ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 30ವರ್ಷದೊಳಗಿರಬೇಕು. ಒಂದು ವರ್ಷದ ಅನುಭವ ಹೊಂದಿರಬೇಕು. ಕ್ಯಾಷಿಯರ್ ಹುದ್ದೆಗೆ ಬಿ.ಕಾಂ, ಬಿಬಿಎ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 30ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ವಿದ್ಯಾರ್ಹತೆಯ ಪ್ರಮಾಣಪತ್ರ ಹಾಗೂ ಆಧಾರ್‌ ಕಾರ್ಡ್‌ ಜೊತೆಗೆ ಮೇಲ್ಕಂಡ ದಿನದಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಈ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ. ಕಚೇರಿಯ ದೂರವಾಣಿ ಸಂಖ್ಯೆ 08472-274846ಗೆ ಕರೆ ಮಾಡಬಹುದಾಗಿದೆ.

ಆ.18 ರಂದು ನೇರ ಸಂದರ್ಶನ; ಕೃಷಿ ವಿಶ್ವವಿದ್ಯಾಲಯದ (AICRP on EAAI) ಕೃಷಿಯಲ್ಲಿ ಶಕ್ತಿಯ ನಿರ್ವಹಣೆ ಯೋಜನೆಯಡಿ ಖಾಲಿ ಇರುವ ಒಂದು ಸೀನಿಯರ್ ರಿಸರ್ಚ್ ಫೆಲೊ ತಾತ್ಕಾಲಿಕ ಹುದ್ದೆಗಾಗಿ ಆಗಸ್ಟ್ 18 ರಂದು ಮಧ್ಯಾಹ್ನ 12.30ಕ್ಕೆ ನೇರ ಸಂದರ್ಶನ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ https://uasd.edu./ ಗೆ ಭೇಟಿ ನೀಡಬಹುದು.

ದೈಹಿಕ ಅತಿಥಿ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಹಾಗೂ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಕರ್ಕಿಹಳ್ಳಿಯಲ್ಲಿ 2002-23ನೇ ಸಾಲಿನಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಕೊಪ್ಪಳ ತಾಲೂಕಿನ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಕರ್ಕಿಹಳ್ಳಿ (ಪ.ಪಂ-858) ಇಲ್ಲಿ 2002-23ನೇ ಸಾಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗೆ ಶೈಕ್ಷಣಿಕ ವರ್ಷದ ಕೊನೆಯವರೆಗೆ ಅಥವಾ ಖಾಯಂ ಶಿಕ್ಷಕರು ಸದರಿ ಹುದ್ದೆಗೆ ಬರುವವರೆಗೂ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅರ್ಜಿ ಸಲ್ಲಿಸಲು ಬಿಎ, ಬಿಪಿಎಡ್ ಮತ್ತು ಟಿಇಟಿ ವಿದ್ಯಾರ್ಹತೆಯನ್ನು ಹೊಂದಿದ ಅರ್ಹ ಅಭ್ಯರ್ಥಿಗಳು ಆಗಸ್ಟ್ 23ರ ಬೆಳಗ್ಗೆ 12 ಗಂಟೆಯ ಒಳಗಾಗಿ ವಸತಿ ಶಾಲೆಗೆ ಅರ್ಜಿ ಸಲ್ಲಿಸಬೇಕು. ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನವನ್ನು ಅದೇ ದಿನ ಮಧ್ಯಾಹ್ನ 2.30 ಗಂಟೆಗೆ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+