ಬುಧವಾರ ಕಲಬುರಗಿಯಲ್ಲಿ ಉದ್ಯೋಗ ಮೇಳ

ಕಲಬುರಗಿ, ಫೆಬ್ರವರಿ 23: ಕಲಬುರಗಿಯಲ್ಲಿ ಫೆಬ್ರವರಿ 24ರಂದು ಉದ್ಯೋಗ ಮೇಳ ನಡೆಯಲಿದೆ. 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಕಲಬುರಗಿಯ ಎಂ. ಎಸ್. ಕೆ. ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ.

ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಮೇಳದಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಯಾನಿಟೈಜರ್ ಉಪಯೋಗಿಸಬೇಕು.

Job Fair In Kalaburagi District Employment Exchange Office On Feb 24

ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಕ್ವಿಸ್ ಕಾರ್ಪ್ ಲಿ., ಎಕ್ಸ್‌ಟ್ರೀಮ್ ಸಾಫ್‌ಟೆಕ್, ಕಲಬುರಗಿಯ ಹೆಚ್.ಸಿ.ಜಿ. ಕ್ಯಾನ್ಸರ್ ಸೆಂಟರ್, ಭಾರತ ಫೈನಾನ್‍ಷಿಯಲ್ ಇನ್‍ಕ್ಲೂಜನ್ ಲಿ., ಮಠ ಕಾರ್ಪೋರೇಟ್ ಸಲ್ಯೂಷನ್, ಕಿಸಾನ ಕ್ರಾಫ್ಟ್ ಅಗ್ರೋ ಫರ್ಟಿಲೈಜರ್, ಬೆಂಗಳೂರಿನ ಜೋಶ್ ಮ್ಯಾನೇಜ್‍ಮೆಂಟ್, ಹೈದರಾಬಾದಿನ ಫುಟರಜ್ ಸ್ಟಾಫಿಂಗ್ ಸಲ್ಯೂಷನ್ ಪೈ.ಲಿ., ಬೆಂಗಳೂರಿನ ಪ್ರಗತಿ ಸಲ್ಯೂಷನ್, ತುಮಕೂರಿನ ಅಭಯ ಸರ್ವೀಸಸ್ ಹಾಗೂ ಎ1 ಜಾಬ್ ಕನ್ಸಲ್‍ಟೆನ್ಸಿ ಆಂಡ್ ಸರ್ವೀಸಸ್ ಕಂಪನಿಗಳು ಪಾಲ್ಗೊಳ್ಳಲಿವೆ.

ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಬಿ.ಫಾರ್ಮಾ, ಎಂ.ಹೆಚ್.ಎ. ಇಂಜಿನಿಯರಿಂಗ್ (ಸಿವಿಲ್ ಬ್ರ್ಯಾಂಚ್ ಹೊರತುಪಡಿಸಿ) ಹಾಗೂ ಪದವೀಧರ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08472-274846.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+