ಬೀದರ್‌ನಲ್ಲಿ ಅಕ್ಟೋಬರ್ 21ರಂದು ಉದ್ಯೋಗ ಮೇಳ

ಬೆಂಗಳೂರು, ಅಕ್ಟೋಬರ್ 21 : ಬೀದರ್‌ನಗರದಲ್ಲಿ ಅಕ್ಟೋಬರ್ 21ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ನಿರುದ್ಯೋಗಿ ಯುವಕ/ಯುವತಿಯರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಬೀದರ್ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10.30ರಿಂದ ಸಂಜೆ 4 ಗಂಟೆ ತನಕ ಉದ್ಯೋಗ ಮೇಳ ನಡೆಯಲಿದೆ.

Recommended Video

      ವಿದ್ಯಾರ್ಥಿಗಳಿಗೆ ಯೋಗಿ ಆದಿತ್ಯನಾಥ್ ಕಿವಿಮಾತು | Yogi Adiyanath | Oneindia kannada

      ಉದ್ಯೋಗ ಮೇಳದಲ್ಲಿ ರಾನೆ ಮದ್ರಾಸ್ ಡೈಕಾಸ್ಟಿಂಗ್, ಹೆಚ್.ಡಿ.ಎಫ್.ಸಿ, ಫಾಸ್ಟ್ ಬರ್ಡ್ ವೇನಚರ್ಸ್ ಇಂಡಿಯಾ ಪ್ರಾ.ಲಿ, ಕರಾವಳಿ ಟೀಚರ್ಸ್, ಬಡವೇ ಎಂಜಿನಿಯರಿಂಗ್ ಲಿ, ಎನ್.ಟಿ.ಟಿ.ಎಫ್, ಕ್ಯಾಪ್ಸ್‍ಟಾನ್ ಸೇಕ್ಯೋರಿಟ್ಸ್, ಡಾ.ರೆಡ್ಡಿ ಫೋಡೆಷನ್, ಅನ್ನಪೂರ್ಣ ಫೈನಾನ್ಸ್ ಲಿ, ರಿಗನಾವೇಟ್ ಟೆಕ್ನಾಲಾಜಿ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಭಾಗವಹಿಸಲಿವೆ.

      jobs

      ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿ. ಎಡ್, ಬಿ. ಎಡ್, ಡಿಪ್ಲೋಮಾ (ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್) ಮತ್ತು ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

      ಉದ್ಯೋಗ ಮೇಳದ ಕುರಿತು ಹೆಚ್ಚಿನ ಜಿಲ್ಲಾ ಉದ್ಯೋಗ ವಿನಿಯಮಯ ಕಚೇರಿ ಸಂಪರ್ಕಿಸಬಹುದು ಅಥವ ದೂರವಾಣಿ ಸಂಖ್ಯೆ 08482-234682, 8217886740ಗೆ ಕರೆ ಮಾಡಬಹುದಾಗಿದೆ.

      ಮೆಡಿಕಲ್ ಆಫೀಸರ್ ಹುದ್ದೆಗೆ ಸಂದರ್ಶನ : ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕ್ಷಯ ರೋಗ ವಿಭಾಗವು ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮೆಡಿಕಲ್ ಆಫೀಸರ್ ಒಂದು ಹುದ್ದೆಗೆ ನೇರ ಸಂದರ್ಶನ ಆಯೋಜಿಸಿದೆ.

      ಮಾಸಿಕ 45 ಸಾವಿರ ರೂ. ವೇತನದ ಈ ಹುದ್ದೆಗೆ ಕನಿಷ್ಠ ಒಂದು ವರ್ಷ ಅನುಭವವಿರುವ ಎಂ.ಬಿ.ಬಿ.ಎಸ್. ಆಗಿರುವವರು ತಮ್ಮ ಮೂಲ ದಾಖಲಾತಿ ಹಾಗೂ ನಕಲು ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

      ವಿಳಾಸ : ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳ ಕಚೇರಿ, ಮೆಗ್ಗಾನ್ ಆಸ್ಪತ್ರೆ ಆವರಣ. ಅಕ್ಟೋಬರ್ 31ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ತನಕ ನೇರ ಸಂದರ್ಶನ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+