ಬೆಂಗಳೂರಿನಲ್ಲಿ ಮಾರ್ಚ್ 10ರಂದು ಉದ್ಯೋಗ ಮೇಳ

ಮಾರ್ಚ್ 10ರ ಶುಕ್ರವಾರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಿದೆ.

ಬೆಂಗಳೂರು, ಮಾರ್ಚ್ 09; ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಬೆಂಗಳೂರು ನಗರದಲ್ಲಿ ಮಾರ್ಚ್ 10ರ ಶುಕ್ರವಾರ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.

ಬೆಂಗಳೂರಿನ ಕೆ. ಜಿ. ರಸ್ತೆಯ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. ನೇರ ಸಂದರ್ಶನದ ಮೂಲಕ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದಾಗಿದೆ ಎಂದು ಮನವಿ ಮಾಡಲಾಗಿದೆ.

Job Fair In Bengaluru City On March 10

ಉದ್ಯೋಗ ಮೇಳದಲ್ಲಿ ಎಸ್. ಎಸ್. ಎಲ್. ಸಿ., ಪಿಯುಸಿ ಯಾವುದೇ ಪದವಿ ಹಾಗೂ ಎಂಎಸ್ಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಾಶಾಸ್ತ್ರ/ ಎಂಬಿಎ/ ಎಂಕಾಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಕನಿಷ್ಠ ಒಂದು ವರ್ಷದ ಹಿಂದೆ ಲಘು ವಾಹನ ಚಾಲಕರ ಪರವಾನಗಿ ಹೊಂದಿರುವ ವಾಹನ ಚಾಲಕರು, 35 ವರ್ಷಗಳ ವಯೋಮಿತಿಯವರು ಭಾಗವಹಿಸಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22374582/ 8310960536 ಕರೆ ಮಾಡಬಹುದಾಗಿದೆ. ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ, ಏಷ್ಯಾಟಿಕ್ ಕಟ್ಟಡ, (ಜನತಾ ಬಜಾರ್) ಕೆ. ಜಿ. ರಸ್ತೆ ಬೆಂಗಳೂರು ಕಛೇರಿಗೆ ಭೇಟಿ ನೀಡಬಹುದು.

ಉದ್ಯೋಗ ಮೇಳ ನಡೆಯುವ ಸ್ಥಳ; ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ, ಏಷ್ಯಾಟಿಕ್ ಕಟ್ಟಡ, (ಜನತಾ ಬಜಾರ್) ಕೆ. ಜಿ. ರಸ್ತೆ ಬೆಂಗಳೂರು.

ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍; ಭಾರತ ಸರ್ಕಾರದ ಎಂಎಂಎಸ್‍ಇ ಸಚಿವಾಲಯದ ಆದೇಶದನ್ವಯ, ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂಎಸ್‍ಎಂಇ ಘಟಕಗಳು (ಉತ್ಪಾದನಾ /ಸೇವಾ ಚಟುವಟಿಕೆ) ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನ್ನು ಪಡೆಯುವುದು ಕಡ್ಡಾಯವಾಗಿದೆ. ಈ ಪ್ರಮಾಣ ಪತ್ರವನ್ನು ಪಡೆದಲ್ಲಿ ಬ್ಯಾಂಕ್‍ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಹಾಗೂ ಸರ್ಕಾರದ ಇತರ ಸವಲತ್ತು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ. ಎಲ್ಲಾ ಎಂಎಸ್‍ಎಂಇ ಘಟಕಗಳು ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನ್ನು ಕಡ್ಡಾಯವಾಗಿ ಪಡೆಯಲು ಮನವಿ ಮಾಡಲಾಗಿದೆ. ಉದ್ಯಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನ್ನು ಆನ್‍ಲೈನ್ https://udyamregistration.gov.in ಮೂಲಕ ಉಚಿತವಾಗಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+