ಧಾರವಾಡ : ಅಣ್ಣಿಗೇರಿಯಲ್ಲಿ ಆ.26ರಂದು ಉದ್ಯೋಗ ಮೇಳ
ಧಾರವಾಡ, ಆಗಸ್ಟ್ 24 : ಅಣ್ಣಿಗೇರಿಯ ರಾಯಣ್ಣ ಯುವಪಡೆ ಆ.26ರಂದು ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ. ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯರು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅಣ್ಣಿಗೇರಿಯ ಶ್ರೀಮತಿ ನಿಂಗಮ್ಮ ಎಸ್.ಹೂಗಾರ ಪದವಿ ಪೂರ್ವ ಕಾಲೇಜು ಅಣ್ಣಿಗೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಆ.26ರಂದು ಬೆಳಗ್ಗೆ 10.30ರಿಂದ ಉದ್ಯೋಗ ಮೇಳ ನಡೆಯಲಿದೆ.
ಐಟಿಐ, ಡಿಪ್ಲೊಮಾ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಪ್ರಮಾಣ ಪತ್ರದ ಮೂಲ ದಾಖಲಾತಿಗಳು, ಬಯೋಡೆಟಾ ಜೊತೆಗೆ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಎಚ್‌ಡಿಎಫ್‌ಸಿ, ಐಬಿಎಂ, ಪೇಟಿಎಂ, ಅಮೇಜಾನ್, ಏರ್ ಟೆಲ್, ಜಸ್ಟ್ ಹೆಲ್ಪ್, ಸಿಎಸ್ಆರ್ ಸೇರಿದಂತೆ ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಯಾದಗಿರಿಯಲ್ಲಿ ಕೆಲಸ ಇದೆ : ಯಾದಗಿರಿ ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿ, ಕಾರ್ಯಕರ್ತೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 13 ಅಂಗನವಾಡಿ ಕಾರ್ಯಕರ್ತೆ ಮತ್ತು 35 ಸಹಾಯಕಿಯರ ಹುದ್ದೆಗಳಿವೆ. ಅರ್ಜಿಗಳನ್ನು ಸಲ್ಲಿಸಲು 3/9/2018 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications