ಹಿರಿಯ ನಾಗರಿಕರಿಗೂ ಉದ್ಯೋಗ ಮೇಳ

ಉದ್ಯೋಗದಿಂದ ನಿವೃತ್ತರಾದವರಿಗಾಗಿ ಮಾರ್ಚ್ 26, ಭಾನುವಾರದಂದು 10 ಗಂಟೆಗೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಬೆಂಗಳೂರು, ಮಾರ್ಚ್ 24: ಉದ್ಯೋಗದಿಂದ ನಿವೃತ್ತರಾದವರಿಗೆ ಮತ್ತು ಇಳಿ ವಯಸ್ಸಿನಲ್ಲಿ ಅಭದ್ರತೆಯಿಂದ ಬಳಲುತ್ತಿರುವವರಿಗೆ ಆರ್ಥಿಕ ಭದ್ರತೆ ನೀಡುವ ಸಲುವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ನಡೆಯಲಿರುವ ಈ ಮೇಳ ಮಾರ್ಚ್ 26, ಭಾನುವಾರದಂದು, ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. 120 ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಲಿರುವ ಈ ಮೇಳಕ್ಕೆ ಎಫ್ ಕೆಸಿಸಿಐ, ಸಿಸಿಐ, ಅವೇಕ್ ಮುಂತಾದ ಸಂಸ್ಥೆಗಳ ಸಹಭಾಗಿತ್ವವಿದೆ.[ಮಲ್ಲೇಶ್ವರಂನಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ]

Job fair for senior citizens

ಆಯಾ ವ್ಯಕ್ತಿಗಳ ಅನುಭವ, ಆಸಕ್ತ ಕ್ಷೇತ್ರ, ಪರಿಣಿತಿಯ ಆಧಾರದ ಮೇಲೆ ಸೂಕ್ತ ಉದ್ಯೋಗ ಪಡೆಯಲು ಹಿರಿಯ ನಾಗರಿಕರಿಗೆ ಇಲ್ಲಿ ಮುಕ್ತ ಅವಕಾಶವಿದೆ ಎಂದು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದ್ದಾರೆ.

ಅಗತ್ಯ ದಾಖಲೆಗಳು

ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ವಯಸ್ಸು 60 ವರ್ಷ ಮೀರಿರಬೇಕು ಮತ್ತು ತಮ್ಮ ಇತ್ತೀಚಿನ 2 ಭಾವಚಿತ್ರ, ಸೇವಾ ಅನುಭವದ ವಿವರಗಳ ಐದು ಪ್ರತಿಯೊಂದಿಗೆ ಮೇಳಕ್ಕೆ ಹಾಜರಿರಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080 22450666/26800333/9243737214

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+