ಕೊಪ್ಪಳದಲ್ಲಿ ಜುಲೈ 7ರಂದು ಉದ್ಯೋಗ ಮೇಳ

ಕೊಪ್ಪಳ, ಜುಲೈ 03 : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜುಲೈ 7 ರಂದು ಉದ್ಯೋಗ ಮೇಳ ನಡೆಯಲಿದೆ. ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ.

ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಡಿಪ್ಲೋಮ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಜುಲೈ 7ರಂದು ಬೆಳಗ್ಗೆ 10.30 ರಿಂದ 3.30ರ ತನಕ ಮೇಳ ನಡೆಯಲಿದೆ.

ಉದ್ಯೋಗ ಮೇಳದಲ್ಲಿ ಟಾಟಾ ಅಡ್ವಾನ್ಸಡ್ ಮೆಟರಿಯಲ್ಸ್ ಲಿ., ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಲಿ., ಬೆಂಗಳೂರು ಹಾಗೂ ಶಿರಸಿಯ ದಿವಾಗಿ ಟ್ರಕ್ ಟ್ರಾನ್ಸಮೀಶನ್ ಪ್ರೈ.ಲಿ. ಕಂಪನಿಗಳು ಭಾಗವಹಿಸಿ ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿವೆ.

Job fair for Diploma students in Koppal on July 7

ಟಾಟಾ ಅಡ್ವಾನ್ಸಡ್ ಮೆಟರಿಯಲ್ಸ್ ಲಿ. ಬೆಂಗಳೂರು ಇವರು 18 ರಿಂದ 24 ವರ್ಷ ವಯೋಮಿತಿಯಲ್ಲಿರುವ ಐಟಿಐ (ಫಿಟ್ಟರ್, ಟರ್ನರ್, ಮಶಿನಿಸ್ಟ್) ಡಿಪ್ಲೋಮ (ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಐಟಿಐ (ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಲೆಕ್ಟ್ರಿಷಿಯನ್, ಎಂ.ಎಂ.ವಿ., ಡಿಎಂ., ವೆಲ್ಡರ್, ಇ/ಎಂ) ವಿದ್ಯಾರ್ಹತೆಯ ಮತ್ತು ದಿವಾಗಿ ಟ್ರಕ್ ಟ್ರಾನ್ಸಮೀಶನ್ ಪ್ರೈ.ಲಿ. ಶಿರಸಿ ಇವರು ಡಿಪ್ಲೋಮ / ಬಿ.ಇ (ಮೆಕ್ಯಾನಿಕಲ್, ಆಟೋಮೊಬೈಲ್) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಆಸಕ್ತರು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಹಾಗೂ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್‌ ಪ್ರತಿ, ಸ್ವವಿವರದ ಪ್ರತಿ ಮತ್ತು ಪಾಸ್‌ಪೋರ್ಟ್ ಅಳತೆಯ 10 ಭಾವಚಿತ್ರಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+