ಮಾ.4ರಂದು ಬೆಂಗ್ಳೂರಿನ ಜೆಪಿ ನಗರದಲ್ಲಿ ಉದ್ಯೋಗ, ಕೌಶಲ್ಯ ಮೇಳ
ಜೆ.ಪಿ ನಗರ 2ನೇ ಹಂತದ ವಾಸವಿ ಎಜ್ಯೂಕೇಶನಲ್ ಟ್ರಸ್ಟ ಶಾಲೆ ಆವರಣದಲ್ಲಿ ಮಾರ್ಚ್ 04ರಂದು ಬೃಹತ್ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ.
ಬೆಂಗಳೂರು, ಫೆಬ್ರವರಿ. 27 : ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ಮತ್ತು ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್ ಅವರ ನೇತೃತ್ವದಲ್ಲಿ ಮಾರ್ಚ್ 04ರಂದು (ಶನಿವಾರ) ಬೃಹತ್ ಉದ್ಯೋಗ ಮತ್ತು ಕೌಶಲ್ಯ ಮೇಳವನ್ನು ಆಯೋಜಿಸಲಾಗಿದೆ.
ಜೆ.ಪಿ ನಗರ 2ನೇ ಹಂತದ ವಾಸವಿ ಎಜ್ಯೂಕೇಶನಲ್ ಟ್ರಸ್ಟ್ ಶಾಲೆ ಆವರಣದಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.30ರ ವರೆಗೆ ಉದ್ಯೋಗ ಮೇಳ ನಡೆಯಲಿದೆ. 80ಕ್ಕೂ ಹೆಚ್ಚು ಉದ್ಯಮ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

8ನೇ ತರಗತಿ, ಎಸ್ಎಸ್ಎಲ್ ಸಿ ಉತ್ತಿರ್ಣ/ಅನುತ್ತೀರ್ಣರಾದವರಿಂದ ಹಿಡಿದು ಪಿಯುಸಿ, ಡಿಪ್ಲೊಮ, ಐಟಿಐ, ವಿವಿಧ ಪದವೀದರರಿಗೆ ಉದ್ಯೋಗ ಒದಗಿಸುವ ಹಾಗೂ ಅಗತ್ಯವಿರುವವರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.
8000953338 ಈ ನಂಬರ್ ಗೆ ಮಿಸ್ ಕಾಲ್ ಕೊಟ್ಟು ತಮ್ಮ ಹೆಸರನ್ನು ನೊಂದಾಯಿಸಬಹುದು. ವೆಬ್ ಸೈಟ್












Click it and Unblock the Notifications