1200 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಜಮ್ಮು ಎಂಡ್ ಕಾಶ್ಮೀರ ಬ್ಯಾಂಕ್

ಬೆಂಗಳೂರು, ಅಕ್ಟೋಬರ್ 18 : ಜಮ್ಮು ಎಂಡ್ ಕಾಶ್ಮೀರ ಬ್ಯಾಂಕ್ 1200 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 10, 2018 ಕೊನೆಯ ದಿನವಾಗಿದೆ.

ಜಮ್ಮು ಎಂಡ್ ಕಾಶ್ಮೀರ ಬ್ಯಾಂಕ್ Banking Associates ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಾಗುತ್ತದೆ.

ಪದವಿ ಅಥವ ಸ್ನಾತಕೋತ್ತರ ಪದವಿಯಲ್ಲಿ ಶೇ 55ರಷ್ಟು ಅಂಕಗಳಿಸಿದವರು ಈ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ವೇತನ ಶ್ರೇಣಿ 11765 ರಿಂದ 31540 ರೂ. ಪ್ರತಿ ತಿಂಗಳು.

J&K Bank recruitment 2018 : Apply for 1200 Banking Associates Posts

ವಯೋಮಿತಿ ವಿವರ : ಅರ್ಜಿಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದ ವಯೋಮಿತಿ ನಿಗದಿಗೊಳಿಸಲಾಗಿದೆ. 1 ಜನವರಿ 2018ಕ್ಕೆ ಅನ್ವಯವಾಗುವಂತೆ.

* ಸಾಮಾನ್ಯ ವರ್ಗ 18 ರಿಂದ 32
* ಎಸ್‌ಸಿ/ಎಸ್‌ಟಿ/ನಿವೃತ್ತ ಯೋಧರು 18 ರಿಂದ 35 ವರ್ಷಗಳು

ಅರ್ಜಿ ಶುಲ್ಕಗಳ ವಿವರ : ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 800 ರೂ.,ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿದೆ. ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+