ITI Limited Jobs: ಬೆಂಗಳೂರು ಸೇರಿ ವಿವಿಧೆಡೆ 50 ಯಂಗ್ ಪ್ರೊಫೇಷನ್ ಹುದ್ದೆಗಳ ನೇಮಕಾತಿ
ಬೆಂಗಳೂರು, ಅಕ್ಟೋಬರ್ 28: ಐಟಿಯ ಲಿಮಿಟೆಡ್ ಕಂಪನಿಯು (ITI Limited Job Recruitment 2024) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಖಾಲಿ ಇರುವ ಹತ್ತಾರು ಉದ್ಯೋಗಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪದವಿ, ಸ್ನಾತಕೋತ್ತರ ಪದವಿ ಪಡೆದು ಕೆಲಸವಿಲ್ಲದೇ ಪರದಾಡುವವರು ಕೂಡಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿರುವವರಿಗೆ ಐಟಿಯ ಲಿಮಿಟೆಡ್ ಕಂಪನಿಯಲ್ಲಿ ವಿವಿಧ 50 ಯಂಗ್ ಪ್ರೊಫೇಷನಲ್ ಹುದ್ದೆಗಳು ಖಾಲಿ ಇವೆ. ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ನವೆಂಬರ್ 28ರೊಳಗೆ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಇಲ್ಲಿ ನೇಮಕಾತಿಗೆ ಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಮಾಸಿಕ ವೇತನ, ಆಯ್ಕೆ ವಿಧಾನ ಸೆರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಬೇಕು.
ನೇಮಕಾತಿ ಫುಲ್ ಡಿಟೇಲ್ಸ್
ನೇಮಕಾತಿ ಸಂಸ್ಥೆ: ಐಟಿಯ ಲಿಮಿಟೆಡ್ ಕಂಪನಿ
ಹುದ್ದೆಗಳು ಹೆಸರು: ಯಂಗ್ ಪ್ರೊಫೇಷನಲ್ ಹುದ್ದೆಗಳು
ಒಟ್ಟು ಹುದ್ದೆಗಳು: 50
ವಯೋಮಿತಿ: ಗರಿಷ್ಠ 32 ವರ್ಷಗಳು
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 28
ಪೋಸ್ಟಿಂಗ್: ಬೆಂಗಳೂರು ಸೇರಿ ವಿವಿಧೆಡೆ
ಹುದ್ದೆಗಳ ಇತರ ವಿವರ
ಒಟ್ಟು 50 ಹುದ್ದೆಗಳ ಪೈಕಿ ಆರ್ ಅಂಡ್ ಡಿ ಹುದ್ದೆ 04, ಡಾಟಾ ಸೆಂಟರ್ 04, ಲೀಗಲ್ ಸೆಲ್ 04, ಸಿವಿಲ್ 03, ಎಚ್‌ಆರ್ 02, ಫೈನಾನ್ಸ್ 08, ಮಾರ್ಕೆಟಿಂಗ್ 07, ಪ್ರಾಜೆಕ್ಟ್ (ಎನ್‌ಎಸ್‌ಯು) 10, ಪ್ರೊಡಕ್ಷನ್ / ಮ್ಯಾನುಫ್ಯಾಕ್ಚರಿಂಗ್ 06 ಮತ್ತು ಫುಲ್ ಸ್ಟಾಕ್ ವೆಬ್ ಡೆವಲಪರ್ ಫಾರ್ ದಿ ಇನ್ಫಾರ್ಮೇಶನ್ ಆಫ್ ಸಿಸ್ಟಮ್ & ಟೆಕ್ನಾಲಜಿ ಐಎಸ್ ಅಂಡ್ ಐಟಿ 02, ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ (ಸಿವಿಲ್), ಬಿಟೆಕ್ (ಕಂಪ್ಯೂಟರ್ ಸೈನ್ಸ್/ಮೆಕಾನಿಕಲ್/ಇಸಿಇ/ಎಲ್ ಆಂಡ್ ಟಿ), ಎಂಎಸ್ ಡಬ್ಲು, ಸಿಎ, ಎಂಬಿಎ, ಸಿಎಂಎ, ಎಲ್ಎಲ್‌ಬಿ, ಬಿಎಲ್, ಪಿಜಿಡಿಎಂ ಇದರಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಆಯಾ ಅರ್ಹತೆಗೆ ತಕ್ಕಂತೆ ನೋಡಿಕೊಂಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಒಮ್ಮೆ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸುವುದು ಒಳಿತು.
ಆಯ್ಕೆ ವಿಧಾನ: ವಯೋಮಿತಿ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ವಯಸ್ಸಾಗಿರಬೇಕು. ಈ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಿ ನಂತರ ನೇರ ಸಂದರ್ಶನ ಮಾಡಲಾಗುತ್ತದೆ. ಆಯ್ಕೆ ಆದವರಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧಡೆ ನಿಯಮಾನುಸಾರ ವೇತನ ಸಹಿತ ಪೋಸ್ಟಿಂಗ್ ನೀಡಲಾಗುತ್ತದೆ.
ಅಭ್ಯರ್ಥಿಗಳು ಅರ್ಜಿಯನ್ನು ಇಲ್ಲಿ ನೀಡಲಾಗಿರುವ ಅಧಿಕೃತ ಲಿಂಖ್ಕ ಮೂಲಕ https://careers.itiltd.in/careers_yp/login_form.php?id=%20NA== ಲಾಗಿನ್ ಆಗಿ ಸೂಕ್ತ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸುವಂತೆ ಐಟಿಐ ಕಂಪನಿಯು ಕೋರಿದೆ.












Click it and Unblock the Notifications