ಐಟಿಬಿಪಿ ನೇಮಕಾತಿ 2023: 297 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ recruitment.itbpolice.nic.in ನಲ್ಲಿ ಅರ್ಜಿ ಸಲ್ಲಿಸಬಹುದು.

ನವದೆಹಲಿ, ಫೆಬ್ರವರಿ 13: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) 297 ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್, ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ ಮತ್ತು ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

297 ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 15 ರಂದು ಪ್ರಾರಂಭವಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 16 ಆಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ recruitment.itbpolice.nic.in ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯಡಿ ಸಂಸ್ಥೆಯಲ್ಲಿ ಖಾಲಿ ಇರುವ 297 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅದರಲ್ಲಿ 5 ಖಾಲಿ ಇರುವ ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ ಹುದ್ದೆಗೆ, 185 ಹುದ್ದೆಗಳು ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ ಹುದ್ದೆಗೆ ಮತ್ತು 107 ಹುದ್ದೆಗಳು ವೈದ್ಯಕೀಯ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ITBP Recruitment 2023: Applications invited for 297 Posts

ಅಭ್ಯರ್ಥಿಗಳು ಸಾಮಾನ್ಯ, ಒಬಿಎಸ್‌ಸಿ ಮತ್ತು ಇಡಬ್ಲುಎಸ್‌ ಅಭ್ಯರ್ಥಿಗಳಿಗೆ 400 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು ಹೊಂದಿರುತ್ತದೆ. ದಾಖಲೀಕರಣ, ಸಂದರ್ಶನ, ದೈಹಿಕ ಗುಣಮಟ್ಟದ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಪರೀಕ್ಷೆ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:
1. itbpolice.nic.in ನಲ್ಲಿ ITBPಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ITBP ನೇಮಕಾತಿಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.
3. ನೀವೇ ನೋಂದಾಯಿಸಿ ಮತ್ತು ಅಗತ್ಯವಿರುವ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ.
4. ಯಾವುದಾದರೂ ಇದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ
5. ಬಳಿಕ ಅರ್ಜಿ ನಮೂನೆಯ ಪ್ರತಿಯನ್ನು ಸಲ್ಲಿಸಿ ಮತ್ತು ಡೌನ್‌ಲೋಡ್ ಮಾಡಿಕೊಂಡು ನಿಮ್ಮಲ್ಲಿ ಒಂದು ಪ್ರತಿ ಇಟ್ಟುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+