205 ಹುದ್ದೆಗಳಿಗೆ ಇಸ್ರೋದಲ್ಲಿ ನೇರ ಸಂದರ್ಶನ

ಬೆಂಗಳೂರು, ಸೆಪ್ಟೆಂಬರ್ 26 : ಇಸ್ರೋ 205 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ 13 ಅಕ್ಟೋಬರ್ 2018ರೊಳಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗ್ರಾಜ್ಯುಯೇಟ್, ಟೆಕ್ನಿಶಿಯನ್ ಮತ್ತು ಟ್ರೇಡ್ ಅಪ್ರೆಂಟೀಸ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದವರು ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ಕೆಲಸ ಮಾಡಬೇಕು.

ಗ್ರಾಜ್ಯುಯೇಟ್ ಅಪ್ರೆಂಟೀಸ್ 41 ಹುದ್ದೆ (ವೇತನ 5000 ಪ್ರತಿ ತಿಂಗಳು), ಟೆಕ್ನಿಶಿಯನ್ ಅಪ್ರೆಂಟೀಸ್ 59 ಹುದ್ದೆ (3542 ಪ್ರತಿ ತಿಂಗಳು) ಮತ್ತು ಟ್ರೇಡ್ ಅಪ್ರೆಂಟೀಸ್ 105 ಹುದ್ದೆ (7200 ಪ್ರತಿ ತಿಂಗಳು).

ISRO recruitment notification 2018

ಗ್ರಾಜ್ಯುಯೇಟ್ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಇಂಜಿನಿಯರಿಂಗ್‌ನಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಟೆಕ್ನಿಶಿಯನ್ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಹಾಕುವವರು ಡಿಪ್ಲೊಮಾ ಇನ್ ಇಂಜಿನಿಯರಿಂಗ್‌/ಟೆಕ್ನಾಲಜಿ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಟ್ರೇಡ್ ಅಪ್ರೆಂಟೀಸ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಐಟಿಐನಲ್ಲಿ ನಿಗದಿತ ಟ್ರೇಡ್ ಕೋರ್ಸ್ ಪೂರ್ಣಗೊಳಿಸಿರಬೇಕು.

ವಯೋಮಿತಿ

* ಗ್ರಾಜ್ಯುಯೇಟ್ ಅಪ್ರೆಂಟೀಸ್ 35 ವರ್ಷ (ಸೆ.29 2018ಕ್ಕೆ ಅನ್ವಯ)
* ಟೆಕ್ನಿಶಿಯನ್ ಅಪ್ರೆಂಟೀಸ್ 35 ವರ್ಷ (ಅಕ್ಟೋಬರ್ 6, 2018 ಕ್ಕೆ ಅನ್ವಯ)
* ಟ್ರೇಡ್ ಅಪ್ರೆಂಟೀಸ್ 35 ವರ್ಷ (13 ಅಕ್ಟೋಬರ್ 2018ಕ್ಕೆ ಅನ್ವಯ)

ಆಸಕ್ತರು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಸೂಕ್ತ ದಾಖಲಾತಿಗಳ ಜೊತೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಸಂದರ್ಶನ ನಡೆಯುವ ಸ್ಥಳ
ISRO Propulsion Complex (IPRC)
Mahendragiri
Tirunelveli District
Tamil Nadu

ಸಂದರ್ಶನದ ದಿನಾಂಕ
* ಗ್ರಾಜ್ಯುಯೇಟ್ ಅಪ್ರೆಂಟೀಸ್ - 29 ಸೆಪ್ಟೆಂಬರ್
* ಟೆಕ್ನಿಶಿಯನ್ ಅಪ್ರೆಂಟೀಸ್ 6 ಅಕ್ಟೋಬರ್
* ಟ್ರೇಡ್ ಅಪ್ರೆಂಟೀಸ್ 13 ಅಕ್ಟೋಬರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+