ಇಂಡಿಯನ್ ಆಯಿಲ್‌ನಲ್ಲಿ 480 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಆಗಸ್ಟ್ 14: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. 480 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 28ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್)
ಒಟ್ಟು ಹುದ್ದೆ: 480
ಹುದ್ದೆ ಹೆಸರು: Trade/Technician Apprentice
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 28, 2021
ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಹುದ್ದೆ
ಟ್ರೇಡ್ ಅಪ್ರೆಂಟಿಸ್
ತಮಿಳುನಾಡು ಹಾಗೂ ಪುದುಚೇರಿ: 179
ಕರ್ನಾಟಕ: 87
ಕೇರಳ: 56
ಆಂಧ್ರಪ್ರದೇಶ: 56
ತೆಲಂಗಾಣ: 52

ಟೆಕ್ನಿಷಿಯನ್ ಅಪ್ರೆಂಟಿಸ್
ತಮಿಳುನಾಡು ಹಾಗೂ ಪುದುಚೇರಿ: 15
ಕರ್ನಾಟಕ: 10
ಕೇರಳ: 08
ಆಂಧ್ರಪ್ರದೇಶ: 09
ತೆಲಂಗಾಣ: 08
* ಇದು 12 ತಿಂಗಳ ಅಪ್ರೆಂಟಿಸ್ ಅವಧಿಯಾಗಿರುತ್ತದೆ.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಐಟಿಐ, ಡಿಪ್ಲೋಮಾ, ಪದವಿ, 12ನೇ ತರಗತಿ.
ವಯೋಮಿತಿ: 18 ರಿಂದ 24 ವರ್ಷ.
ವಯೋಮಿತಿ ವಿನಾಯಿತಿ:
ಒಬಿಸಿ, 2ಎ, 2ಬಿ, 3ಎ ಹಾಗೂ 3ಬಿ ಅಭ್ಯರ್ಥಿ: 3 ವರ್ಷ.
ಎಸ್ ಸಿ, ಎಸ್ಟಿ ಅಭ್ಯರ್ಥಿ: 5 ವರ್ಷ
ದಿವ್ಯಾಂಗ ಅಭ್ಯರ್ಥಿ: 10 ವರ್ಷ
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ದಾಖಲೆ ಪರಿಶೀಲನೆ, ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 13-08-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-08-2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಐಒಸಿಎಲ್ ಅಧಿಕೃತ ವೆಬ್ ತಾಣ((http://iocl.onlinereg.in/ioclsrreg0821/Home.aspx))ಕ್ಕೆ ಭೇಟಿ ಕೊಡಿ.
ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ. ನಿಮ್ಮ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ನೋಂದಣಿಸಿಕೊಳ್ಳುವುದು ಅಗತ್ಯ.
ಸರ್ಕಾರಿ ಸ್ವಾಮ್ಯದ ಇಂಡಿಯಲ್ ಆಯಿಲ್ ಕಂಪನಿ ಲಿಮಿಟೆಡ್ ಆಗಿ 1959 ರಲ್ಲಿ ಇಂಡಿಯಲ್ ಆಯಿಲ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇಂಡಿಯ್ ರಿಫೈನರೀಸ್ ಲಿಮಿಟೆಡ್‌ನೊಡನೆ ವಿಲೀನದೊಂದಿಗೆ 1964 ರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ರೂಪಿತವಾಯಿತು.











Click it and Unblock the Notifications