ಇಂಡಿಯನ್ ಆಯಿಲ್‌ನಲ್ಲಿ 346 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಫೆಬ್ರವರಿ 9: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. 346 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಮಾರ್ಚ್ 07ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್)
ಒಟ್ಟು ಹುದ್ದೆ: 346
ಹುದ್ದೆ ಹೆಸರು: Technical and Non-Technical Apprentice
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 07, 2021
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಐಟಿಐ, ಡಿಪ್ಲೋಮಾ, ಪದವಿ, 12ನೇ ತರಗತಿ.

ವಯೋಮಿತಿ: 18 ರಿಂದ 24 ವರ್ಷ 2021 ಫೆಬ್ರವರಿ 28ರ ಅನ್ವಯ.
ವಯೋಮಿತಿ ವಿನಾಯಿತಿ:
ಒಬಿಸಿ, 2ಎ, 2ಬಿ, 3ಎ ಹಾಗೂ 3ಬಿ ಅಭ್ಯರ್ಥಿ: 3 ವರ್ಷ.
ಎಸ್ ಸಿ, ಎಸ್ಟಿ ಅಭ್ಯರ್ಥಿ: 5 ವರ್ಷ
ದಿವ್ಯಾಂಗ ಅಭ್ಯರ್ಥಿ: 10 ವರ್ಷ
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 05/02/2021.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07/03/2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications