68 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಓಸಿಎಲ್
ಬೆಂಗಳೂರು, ಜನವರಿ 01 : ಐಓಸಿಎಲ್ 68 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 28, 2019 ಕೊನೆಯ ದಿನವಾಗಿದೆ.
ಭಾರತೀಯ ತೈಲ ನಿಗಮ ನಿಯಮಿತ (ಐಓಸಿಎಲ್) ಜ್ಯೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.
ಕೆಮಿಕಲ್/ರಿಫೈರ್ನರಿ&ಪೆಟ್ರೊಕೆಮಿಕಲ್/ಮೆಕಾನಿಕಲ್/ಎಲೆಕ್ಟ್ರಿಕಲ್/Instrumentation/Instrumentation & ಎಲೆಕ್ಟ್ರಾನಿಕ್ಸ್/Instrumentation & ಕಂಟ್ರೋಲ್ ಇಂಜಿನಿಯರಿಂಗ್ ಮೂರು ವರ್ಷದ ಡಿಪ್ಲೊಮಾ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.

ಬಿಎಸ್‌ಸಿ (ಗಣಿತ, ಫಿಸಿಕ್ಸ್, ಕೆಮಿಸ್ಟ್ರಿ ಅಥವ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಷಯವನ್ನು ಮಾನ್ಯತೆ ಪಡೆದ ಸಂಸ್ಥೆ ಅಥವ ವಿಶ್ವವಿದ್ಯಾಲಯದಿಂದ ಶೇ 50ರಷ್ಟು ಅಂಕಗಳೊಂದಿಗೆ (ಸಾಮಾನ್ಯ ವರ್ಗ ಶೇ 45) ಪೂರ್ಣಗೊಳಿಸಿದವರು ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 26 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. (31 ಡಿಸೆಂಬರ್ 2018 ಕ್ಕೆ ಅನ್ವಯವಾಗುವಂತೆ).
ವೇತನ ಶ್ರೇಣಿ : 11900-32000 ಪ್ರತಿ ತಿಂಗಳು.
ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಅಂಗವಿಕಲ/ನಿವೃತ್ತ ಯೋಧರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ವರ್ಗ/ಓಬಿಸಿ ಅಭ್ಯರ್ಥಿಗಳಿಗೆ 150 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications