ಯಾದಗಿರಿ; ತಜ್ಞ ವೈದ್ಯರ ಹೆಚ್ಚುವರಿ ಹುದ್ದೆಗಳಿಗೆ ಸಂದರ್ಶನ

ಯಾದಗಿರಿ, ಮೇ 19; ಕೋವಿಡ್ 2ನೇ ಅಲೆಯು ತೀವ್ರವಾಗಿ ಹರಡುತ್ತಿದೆ. ಯಾದಗಿರಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞವೈದ್ಯರ ಹೆಚ್ಚುವರಿ ಹುದ್ದೆಯನ್ನು ಸೆಪ್ಟೆಂಬರ್-2021ರ ವರೆಗೆ ಮಾತ್ರ ಭರ್ತಿಮಾಡಲಾಗುತ್ತದೆ. ಆಸಕ್ತರು ಮೇ 20ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮೇ 20ರಿಂದ ಹುದ್ದೆಗಳು ಭರ್ತಿಯಾಗುವವರೆಗೆ ಪ್ರತಿದಿನ ಬೆಳಿಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಯಾದಗಿರಿ ಕಚೇರಿಯಲ್ಲಿ ಸಂದರ್ಶನವನ್ನು ನಡೆಸಲಾಗುತ್ತದೆ. ಹುದ್ದೆಗಳ ವೇತನವನ್ನು ಸಂದರ್ಶನದ ಸಮಯದಲ್ಲಿ ನಿಗದಿಪಡಿಸಲಾಗುತ್ತದೆ.

ಕೋವಿಡ್ ಜಿಲ್ಲಾ ಆಸ್ಪತ್ರೆಯಲ್ಲಿ ಮಂಜೂರಾದ ವೈದ್ಯಕೀಯ ತಜ್ಞರ 3 ಹುದ್ದೆಗಳಿಗೆ ಎಂ.ಬಿ.ಬಿ.ಎಸ್.ಎಂ.ಡಿ ವಿದ್ಯಾರ್ಹತೆ ಹೊಂದಿರುವವರು ಸಂದರ್ಶನಕ್ಕೆ ಬರಬಹುದು. ಅರವಳಿಕೆ ತಜ್ಞರ (3) ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ಡಿ.ಎ / ಎಂ.ಡಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

 Interview In Yadgir From May 20 For Doctor Post

ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (8) ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (2) ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ವಿದ್ಯಾರ್ಹತೆ ಹೊಂದಿರಬೇಕು. ಅವಶ್ಯವಿರುವ ಹೆಚ್ಚುವರಿ ವೈದ್ಯಕೀಯ ತಜ್ಞರ (2) ಹುದ್ದೆಗಳಿಗೆ ಎಂ.ಬಿ.ಬಿ.ಎಸ್./ ಎಂ.ಡಿ ವಿದ್ಯಾರ್ಹತೆ ಹೊಂದಿರಬೇಕಿದೆ.

ಅವಶ್ಯವಿರುವ ಹೆಚ್ಚುವರಿ ಅರವಳಿಕೆ ತಜ್ಞರ (2) ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ಡಿ.ಎ / ಎಂ.ಡಿ ವಿದ್ಯಾರ್ಹತೆ ಹೊಂದಿರಬೇಕಿದೆ. ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (8) ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ವಿದ್ಯಾರ್ಹತೆ ಹೊಂದಿರಬೇಕಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+