Intelligence Bureau Recruitment 2023: ವಿವಿಧ 677 ಹುದ್ದೆಗಳು ಖಾಲಿ ಇವೆ, ಕೂಡಲೇ ಅರ್ಜಿ ಹಾಕಿ

ಬೆಂಗಳೂರು, ಅಕ್ಟೋಬರ್ 23: ಗುಪ್ತಚರ ದಳ ಇಲಾಖೆಯು ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವವರು ಕೂಡಲೇ ಅರ್ಜಿ ಹಾಕುವಂತೆ ಕೋರಲಾಗಿದೆ.

ಗುಪ್ತಚರ ದಳ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 677 ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್ ಸೇರಿ ಹಲವು ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಇದೇ ನವೆಂಬರ್ 13 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಹುದ್ದೆ ಕುರಿತು ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಿ.

Intelligence Bureau Recruitment 2023: IB Invite Application by Eligible Candidats For 677 Post

ನೇಮಕಾತಿ ಪ್ರಕ್ರಿಯೆ

ಸಂಸ್ಥೆ ಹೆಸರು: ಗುಪ್ತಚರ ಇಲಾಖೆ

ಹುದ್ದೆ ಹೆಸರು: ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್​ ಎಂಟಿಎಸ್

ಖಾಲಿ ಹುದ್ದೆ ಸಂಖ್ಯೆ: 677

ಮಾಸಿಕ ವೇತನ: 21,700 ರಿಂದ 69,100 ರೂಪಾಯಿ

ಉದ್ಯೋಗದ ಸ್ಥಳ: ಭಾರತ

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ನವೆಂಬರ್ 13

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ ಎಂದು ಗುಪ್ತಚರ ದಳ ನೇಮಕಾತಿ ಅಧಿಸೂಚನೆ ತಿಳಿಸಿದೆ.

Intelligence Bureau Recruitment 2023: IB Invite Application by Eligible Candidats For 677 Post

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್ ಹುದ್ದೆಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಜನರಲ್ ಹುದ್ದೆ ಸೇರುವವರಿಗೆ 18ರಿಂದ 25 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.

ಇನ್ನೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ PwD ಅಭ್ಯರ್ಥಿಗಳಿಗೆ ಒಟ್ಟು ಹತ್ತು ವರ್ಷ ನಿಗದಿ ಮಾಡಲಾಗಿದೆ.

ವೇತನ ಮಾಹಿತಿ

ಈ ಎರಡು ಹುದ್ದೆಗಳಿಗೆ ಮಾಸಿಕ ಕ್ರಮವಾಗಿ 21,700 ರಿಂದ 69,100 ವೇತನ ಮತ್ತು 18,000 ರಿಂದ 56,900 ರೂಪಾಯಿ ವೇತನ ಸಿಗಲಿದೆ. ಇನ್ನೂ ಪರೀಕ್ಷಾ ಶುಲ್ಕವೆಂದು 50 ರೂ. ಹಾಗೂ ನೇಮಕಾತಿ ಪ್ರಕ್ರಿಯೆ ಶುಲ್ಕ - 450 ರೂಪಾಯಿ ನಿಗದಿ ಮಾಡಲಾಗಿದೆ.

ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಜನರಲ್ ಹುದ್ದೆಗಳಿಗೆ ಅರ್ಜಿ ಹಾಕುವ PwD ಅಭ್ಯರ್ಥಿಗಳು 450 ರೂ., ಸಾಮಾನ್ಯ/ಓಬಿಸಿ/EWS ಪುರುಷ ಅಭ್ಯರ್ಥಿಗಳು 500 ರೂ. ನಿಗದಿ ಮಾಡಲಾಗಿದೆ. ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್​ ಹುದ್ದೆಗಳಿಗೆ

ಎಲ್ಲಾ ಅಭ್ಯರ್ಥಿಗಳು 500 ರೂ. ನಿಗದಿ ಮಾಡಲಾಗಿದೆ. ಈ ಶುಲ್ಕವನ್ನು ಆನ್‌ಲೈನ್‌ ಮೂಲಕಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆನ್​​ಲೈನ್ ಪರೀಕ್ಷೆ ನಡೆಸಲಾಗುವುದು. ನಂತರ ಮೋಟಾರ್ ಮೆಕ್ಯಾನಿಸಂ, ಡ್ರೈವಿಂಗ್ ಟೆಸ್ಟ್​

ಡಿಸ್​ಕ್ರಿಪ್ಟಿವ್​ ಟೆಸ್ಟ್ ನಡೆಸಿ ನಂತರ ಸಂದರ್ಶನ ಮಾಡಲಾಗುವುದು. ಆಯ್ಕೆ ಆಗುವವರಿಗೆ ಭಾರತದಲ್ಲಿ ಎಲ್ಲಿಯಾದರೂ ಪೋಸ್ಟಿಂಗ್ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9986640811 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+