RRB-Railway Recruitment: ರೈಲ್ವೆಯಲ್ಲಿ ಬರೋಬ್ಬರಿ 10 ಸಾವಿರ ಉದ್ಯೋಗ ಅವಕಾಶ! ಹುದ್ದೆಗಳ ವಿವರ, ವೇತನ
ಕೇಂದ್ರ ಸರ್ಕಾರಿ ನೌಕರಿ ಅದರಲ್ಲೂ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸಂತಸದ ಸುದ್ದಿ ನೀಡಲಾಗಿದೆ. ಭಾರತೀಯ ರೈಲ್ವೆಯು ರೈಲ್ವೆ ALP ನೇಮಕಾತಿ 2025 ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ನೀಡಿರುವ ಇಲಾಖೆಯು ತನ್ನಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದೆ.
ರೈಲ್ವೆ ನೇಮಕಾತಿ ಮಂಡಳಿಯು (RRB) ವ್ಯಾಪ್ತಿಯಲ್ಲಿ 9970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರ ಉದ್ಯೋಗ ಬಯಸಿದವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ನೇಮಕಾತಿ, ಆಯ್ಕೆ, ಆಕರ್ಷಕ ವೇತನ ವಿವರ ಇಲ್ಲಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆಗಳ ಹೆಸರು: ಸಹಾಯಕ ಲೋಕೋ ಪೈಲಟ್ (ALP)
ಒಟ್ಟು ಹುದ್ದೆಗಳು: 9970
ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್ 12
ಅರ್ಜಿ ಸಲ್ಲಿಕೆ ಕೊನೆ ದಿನ: ಮೇ 11
ಪೋಸ್ಟಿಂಗ್ ಸ್ಥಳ: ಭಾರತ
ಮಾಸಿಕ ವೇತನ: ₹19,900 ಇತರ ಸೌಲಭ್ಯ, ಭತ್ಯೆಗಳು
ಅಭ್ಯರ್ಥಿಗಳ ವಯಸ್ಸಿನ ಮಿತಿ: ಕನಿಷ್ಠ 18 ರಿಂದ ಗರಿಷ್ಠ 30
ರೈಲ್ವೆ ನೇಮಕಾತಿ ಮಂಡಳಿ (RRB) ರೈಲ್ವೆಯ ವಿವಿಧ ವಲಯಗಳ ಒಟ್ಟು 9970 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಏಪ್ರಿಲ್ 12ರಿಂದ ಆರಂಭಸಿಇದೆ. ಆನ್‌ಲೈfನ್ ಮೂಲಕ ಅಭ್ಯರ್ಥಿಗಳು ಮೇ 11ರೊಳಗೆ ಸಲ್ಲಿಸಬೇಕು. ಅದಕ್ಕಾಗಿ ನೀವು ಈ ಅಧಿಕೃತ ವೆಬ್‌ಸೈಟ್‌ಗೆ www.rrbapply.gov.in ಗೆ ಭೇಟಿ ನೀಡಬೇಕು.

ಶೈಕ್ಷಣಿಕ ಅರ್ಹತೆ
ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ನೋಡುವುದಾದರೆ, ಅವರು ಎಸ್‌ಎಸ್‌ಎಲ್‌ಸಿ, ಐಟಿಐ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿರಬೇಕು. ಅಗತ್ಯವಿರುವ ವೈದ್ಯಕೀಯ ಮಾನದಂಡ ಸಹ ಪರಿಗಣಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಮಾಸಿಕ ವೇತನ
ನೇಮಕಾತಿ ಪ್ರಕ್ರಿಯೆಯು 04 ಹಂತಗಳನ್ನು ಒಳಗೊಂಡಿದೆ. ಸಿಬಿಟಿ 1, ಸಿಬಿಟಿ 2, ಸಿಬಿಎಟಿ ಹಾಗೂ ಕೊನೆಯದಾಗಿ ದಾಖಲೆ ಪರಿಶೀಲನೆ ಇರುತ್ತದೆ. ಎಲ್ಲ ಹಂತಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಎರಡನೇ ಹಂತದ ವೇತನ ಶ್ರೇಣಿಯಲ್ಲಿ ಸಹಾಯಕ ಲೋಕೋ ಪೈಲಟ್‌ಗಳಾಗಿ ನೇಮಕ ಮಾಡಲಾಗುತ್ತದೆ. ಆಯ್ಕೆ ಆದ ಅಭ್ಯರ್ಥಿಗಳ ಮೂಲ ವೇತನ ಮಾಸಿಕವಾಗಿ ತಿಂಗಳಿಗೆ ₹19,900 ರೂಪಾಯಿ ಇರುತ್ತದೆ. ಇದರೊಂದಿಗೆ ವಿವಿಧ ಭತ್ಯೆಗಳು, ಸೌಲಭ್ಯಗಳು ಸಿಗುತ್ತವೆ.
ಅರ್ಜಿ ಸಲ್ಲಿಕೆ ವಿವರ
ಅರ್ಜಿಗಳನ್ನು ಅಭ್ಯರ್ಥಿಗಳು ನೀಡಲಾದ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು. ಮೇ 11ರ ಒಳಗೆ ಭರ್ತಿ ಮಾಡಿ ತುಂಬಬೆಕು. ಬಳಿಕ ಮೇ 13 ಅಥವಾ ಅದಕ್ಕೂ ಮೊದಲು ರಾತ್ರಿ 11:59 ರವರೆಗೆ ಅರ್ಜಿ ಶುಲ್ಕ ಪಾವತಿಗೆ ಸಮಯ ನೀಡಲಾಗಿದೆ. ಒಂದು ವೇಳೆ ನೀವು ನಿಮ್ಮ ಅರ್ಜಿ ತಿದ್ದುಪಡಿ ಮಾಡುತ್ತೀರಿ ಎಂದಾದಲ್ಲಿ ಅಂತವರಿಗೆ ಮೇ 14 ರಿಂದ ಮೇ 23, ರವರೆಗೆ ಅವಕಾಶ ನೀಡಲಾಗಿದೆ.
ಸಿಬಿಟಿ ಪರೀಕ್ಷೆಗಳ ಸಿದ್ಧತೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಡೆಯುವ ಸಿಬಿಟಿ 1 ಹಾಗೂ ಸಿಬಿಟಿ 2 ಪರೀಕ್ಷೆಗೆ ಹಾಜರಾಗಬೇಕು. ಅವರು ಸಾಮಾನ್ಯ ಜ್ಞಾನ, ಗಣಿತ, ತಾರ್ಕಿಕತೆ ಮತ್ತು ಸಾಮಾನ್ಯ ವಿಜ್ಞಾನ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಕಳೆದ ವರ್ಷದ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಅಣಕು ಪರೀಕ್ಷೆ ಮಾಡಿದರೆ ಇನ್ನೂ ಒಳ್ಳೆಯದು.












Click it and Unblock the Notifications