Indian Railways Recruitment 2024: 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ಎಷ್ಟು ತಿಳಿಯಿರಿ

Indian Railways Recruitment 2024: ಭಾರತೀಯ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ವಿಶೇಷ ರೈಲುಗಳನ್ನು ಒದಗಿಸುಗತ್ತಲೇ ಇರುತ್ತದೆ. ಅಷ್ಟೇ ಅಲ್ಲದೆ, ಆಗಾಗ ಉದ್ಯೋಗವಕಾಶಗಳನ್ನು ಕೂಡ ಒದಗಿಸುತ್ತಾ ಬಂದಿದೆ. ಇದೀಗ ಖಾಲಿಯಿರುವ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂದು ಇಲ್ಲಿ ತಿಳಿಯಿರಿ.

ರೈಲ್ವೆ ಇಲಾಖೆಯು ಖಾಲಿಯಿರುವ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಟೆಕ್ನಿಷಿಯನ್ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್‌ 6, 2024 ಆಗಿದೆ. ಹಾಗಾದರೆ ಆಯ್ಕೆಯಾದವರಿಗೆ ಮಾಸಿಕ ವೇತನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Indian Railways invited applications for 14 298 posts

ಒಟ್ಟು 18 ಕೆಟಗರಿಗಳಲ್ಲಿ 9,144 ಟೆಕ್ನಿಷಿಯನ್ (ಗ್ರೇಡ್‌ 1, 3) ಹುದ್ದೆಗಳನ್ನು ಭರ್ತಿ ಮಾಡಲು ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ ಇನ್ನೂ ಹಲವು ವರ್ಕ್‌ಶಾಪ್‌, ಡಿವಿಷನ್‌ಗಳಿಂದ ಹೆಚ್ಚುವರಿ 22 ಕೆಟಗರಿಗಳಲ್ಲಿ ಟೆಕ್ನಿಷಿಯನ್ ಹುದ್ದೆಗಳಿಗೆ ಬೇಡಿಕೆ ಸಲ್ಲಿಕೆಯಾದ ಹಿನ್ನೆಲೆ ಒಟ್ಟಾರೆ 40 ಕೆಟಗರಿಗಳಲ್ಲಿ 14,298 ಹುದ್ದೆಗಳ ಭರ್ತಿಗೆ ರೈಲ್ವೇ ನೇಮಕಾತಿ ಮಂಡಳಿ ಅರ್ಜಿ ಅಹ್ವಾನಿಸಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ವಿವರ: ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ (ಓಪನ್ ಲೈನ್)- 1,092 ಹುದ್ದೆಗಳು ಖಾಲಿಯಿದ್ದು, ಅರ್ಜಿ ಸಲ್ಲಿಸಬಯಸುವವರು ಡಿಪ್ಲೋಮಾ, ಬಿ.ಎಸ್‌ಸಿ, ಬಿಇ / ಬಿ.ಟೆಕ್‌ ಉತ್ತೀರ್ಭರಾಗಿರಬೇಕು.

* ಟೆಕ್ನಿಷಿಯನ್ ಗ್ರೇಡ್ III 8,052 ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಹೆ ಅರ್ಜಿ ಸಲ್ಲಿಸಬಯಸುವವರು 10, 12ನೇ ತರಗತಿ, ಐಟಿಐ ಉತ್ತೀರ್ಣರಾಗಿಬೇಕಾಗುತ್ತದೆ.

* ಟೆಕ್ನಿಷಿಯನ್ ಗ್ರೇಡ್ III (ವರ್ಕ್ ಶಾಪ್ & ಪಿಯು) 5,154 ಹುದ್ದೆಗಳು ಖಾಲಿದ್ದು, ಅರ್ಜಿ ಸಲ್ಲಿಸಬಯಸುವವರು 10, 12ನೇ ತರಗತಿ, ಐಟಿಐ ಉತ್ತೀರ್ಣರಾಗಿಬೇಕಾಗುತ್ತದೆ.

ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರ: ಟೆಕ್ನಿಷಿಯನ್ ಗ್ರೇಡ್ I ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 18-36 ಮತ್ತು ಟೆಕ್ನಿಷಿಯನ್ ಗ್ರೇಡ್ III ಹುದ್ದೆ-ವಯಸ್ಸು 18-33 ವರ್ಷದೊಳಗಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಇನ್ನು ಅರ್ಜಿ ಸಲ್ಲಿಸಲು ಎಸ್‌ಸಿ/ಎಸ್‌ಟಿ /ಮಾಜಿ ಯೋಧರು/ಪಿಡಬ್ಲ್ಯುಬಿಡಿ /ಮಹಿಳೆಯರು/ತೃತೀಯ ಲಿಂಗಿಗಳು/ಇಬಿಎಸ್‌ ಅಭ್ಯರ್ಥಿಗಳು 250 ರೂಪಾಯಿ ಮತ್ತು ಇತರ ಅಭ್ಯರ್ಥಿಗಳು 500 ರೂಪಾಯಿ ಶುಲ್ಕವನ್ನು ಪಾವತಿಸಬೇಕು.

ಆಯ್ಕೆಯಾದವರಿಗೆ ಮಾಸಿಕ ವೇತನ ಎಷ್ಟು?: ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ಇರಲಿದೆ. ಆಯ್ಕೆಯಾದವರಿಗೆ ಟೆಕ್ನಿಷಿಯನ್‌ ಗ್ರೇಡ್‌ I ಹುದ್ದೆಗಳಿಗೆ 29,200 ರೂಪಾಯಿ ಮತ್ತು ಟೆಕ್ನಿಷಿಯನ್‌ ಗ್ರೇಡ್‌ III ಹುದ್ದೆಗಳಿಗೆ 19,900 ರೂಪಾಯಿ ಮಾಸಿಕ ವೇತನ ಇರಲಿದೆ.

ಅರ್ಜಿ ಸಲ್ಲಿಸುವ ವಿಧಾನ

* https://www.rrbapply.gov.inಗೆ ಭೇಟಿ ನೀಡಿ
* ಹೆಸರು ನೋಂದಾಯಿಸಿ ಲಾಗಿನ್‌ ಆಗಿ.
* ಅಪ್ಲಿಕೇಷನ್‌ ಫಾರಂ ಅನ್ನು ಭರ್ತಿ ಮಾಡಿ.
* ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
* ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ, Submit ಬಟನ್‌ ಕ್ಲಿಕ್‌ ಮಾಡಿ.
* ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.
* ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್‌ indianrailways.gov.inಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+