ಭಾರತೀಯ ಅಂಚೆ ಇಲಾಖೆ ಭರ್ಜರಿ ನೇಮಕಾತಿ: 12,000 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಮೇ 23: ಭಾರತೀಯ ಅಂಚೆ ಇಲಾಖೆ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಇದು 12,828 ಹುದ್ದೆಗಳ ಭರ್ತಿಗೆ ಮತ್ತೊಂದು ಅಧಿಸೂಚನೆಯನ್ನು ಹೊರಡಿಸಿದೆ.
ಇಲಾಖೆಯು ಜನವರಿ 2023 ರಲ್ಲಿ ಒರೋಬ್ಬರಿ 40,889 ಹುದ್ದೆಗಳ ನೇಮಕಕ್ಕೆ ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಈಗಾಗಲೇ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಭಾರತೀಯ ಅಂಚೆ 12,828 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.

ಮೇ 2023 ವಿಶೇಷ ನೇಮಕಾತಿ ಅಡಿಯಲ್ಲಿ ಈ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಂಕಗಳ ಅಂದರೆ ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.
ಉದ್ಯೋಗ ಮಾಹಿತಿ ಇಂತಿದೆ:
ಎ. ಹುದ್ದೆಗಳ ಹೆಸರು - ಗ್ರಾಮೀಣ ಡಾಕ್ ಸೇವಕ್.
ಬಿ. ಭಾರತದಾದ್ಯಂತ ಹುದ್ದೆಗಳ ಸಂಖ್ಯೆ -12,828.
ವೇತನ ಮಾಹಿತಿ
ಎ. ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (BPM) - ರೂ. 12,900-29,380/-.
ಬಿ. ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM) - ರೂ.10,000-24,470/-.

ಹುದ್ದೆಗೆ ಅರ್ಹತೆಗಳು
ಎ. ಕನಿಷ್ಠ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಉತ್ತೀರ್ಣರಾಗಿರಬೇಕು.
ಬಿ. ಅಭ್ಯರ್ಥಿಗಳು ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು.
ಸಿ. ಕರ್ನಾಟಕ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದಲು, ಬರೆಯಲು ಮಾತನಾಡಲು ತಿಳಿದಿರಬೇಕು.
ವಯಸ್ಸಿನ ಅರ್ಹತೆ
ಎ. ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
ಬಿ. ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಿ. ಎಸ್‌ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಎ. ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ - 22-05-203.
ಬಿ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 11-06-2023.
ಸಿ. ಅರ್ಜಿ ತಿದ್ದುಪಡಿಗೆ ಅವಕಾಶ - 12-06-2023 ರಿಂದ 14-06-2023ರ ವರೆಗೆ.












Click it and Unblock the Notifications