ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Indian Navy Recruitment 2023: 248 ಹುದ್ದೆಗೆಗಳಿಗೆ SSLC ಪಾಸಾದವರು ಫೆ. 27ರೊಳಗೆ ಅರ್ಜಿ ಹಾಕಿ

ಭಾರತೀಯ ನೌಕಾಪಡೆಯು ತನ್ನಲ್ಲಿ ಖಾಲಿ ಇರುವ ಒಟ್ಟು 248 ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. SSLC ಪಾಸಾದವರಿಗೆ ಇಲ್ಲಿ ಅವಕಾಶ ಇದೆ.

|
Google Oneindia Kannada News

ಬೆಂಗಳೂರು, ಜನವರಿ 31: ಭಾರತೀಯ ನೌಕಾಪಡೆಯು ತನ್ನಲ್ಲಿ ಖಾಲಿ ಇರುವ ಒಟ್ಟು 248 ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಮುಖ್ಯವಾಗಿ ಈ ಭಾರಿ ನೌಕಾಪಡೆ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದವರಿಗೂ ಉದ್ಯೋಗ ಮಾಡಲು ಅವಕಾಶ ನೀಡಿದೆ.

ಭಾರತೀಯ ನೌಕಾಪಡೆಯಲ್ಲಿ ಒಟ್ಟು 248 ಟ್ರೇಡ್ಸ್​ಮ್ಯಾನ್ ಸ್ಕಿಲ್ಡ್ ಹುದ್ದೆಗಳು ಖಾಲಿ ಇವೆ. ಅರ್ಹ ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 27 ರೊಳಗೆ ಅಧಿಸೂಚನೆಯಲ್ಲಿ ತಿಳಿಸಿರುವ ನಿಯಮಗಳನ್ವಯ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕಿದೆ. 10ನೇ ಪಾಸಾದವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

Karnataka SSLC Exam 2023 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ , ಮಾಹಿತಿ ಇಲ್ಲಿದೆKarnataka SSLC Exam 2023 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ , ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು, ಶೈಕ್ಷಣಿಕ ಅರ್ಹತೆ, ವಯಸ್ಸು, ವೇತನ ಶ್ರೇಣಿ ಎಷ್ಟು ಎಂಬ ಹಲವು ವಿಷಯಗಳನ್ನು ಇಲ್ಲಿ ಪರಿಶೀಲಿಸಬಹುದು.

Indian Navy Recruitment 2023: Invites application for 248 form eligible

ನೌಕಾಪಡೆ ಹುದ್ದೆಗಳ ವಿವರ

ಸಂಸ್ಥೆ- ಭಾರತೀಯ ನೌಕಾಪಡೆ

ಒಟ್ಟು ಹುದ್ದೆ- 248

ಹುದ್ದೆ ಹೆಸರು- ಟ್ರೇಡ್ಸ್​ಮ್ಯಾನ್ ಸ್ಕಿಲ್ಡ್

ಸಂಬಳ - 19,900- 63,200

ಉದ್ಯೋಗ ಸ್ಥಳ- ಭಾರತ

ಖಾಲಿ ಹುದ್ದೆಗಳ ಪೂರ್ತಿ ವಿವರ

ಮೆಷಿನಿಸ್ಟ್​ ಹುದ್ದೆ- 8

ಡ್ರೈವರ್ ಕ್ರೇನ್ ಮೊಬೈಲ್ ಹುದ್ದೆ- 6

ಫಿಟ್ಟರ್ ಆರ್ಮಮೆಂಟ್ ಹುದ್ದೆ- 55

ಫಿಟ್ಟರ್​ ಜನರಲ್ ಮೆಕ್ಯಾನಿಕ್ ಹುದ್ದೆ - 36

ಫಿಟ್ಟರ್ ಎಲೆಕ್ಟ್ರಾನಿಕ್ ಹುದ್ದೆ - 12

ಶಿಪ್​​ರೈಟ್ (ಜಾಯ್ನರ್) ಹುದ್ದೆ - 2

ಪೇಂಟರ್ ಹುದ್ದೆ- 2

ಎಲೆಕ್ಟ್ರಿಕಲ್ ಫಿಟ್ಟರ್ ಹುದ್ದೆ- 9

ಸ್ಕಿಲ್ಡ್​ (ಅಮ್ಯುನಿಷನ್ ಮೆಕ್ಯಾನಿಕ್) ಹುದ್ದೆ- 20

ಟೊರ್ಪೆಡೊ ಫಿಟ್ಟರ್ ಹುದ್ದೆ ​- 44

ಎಲೆಕ್ಟ್ರಾನಿಕ್ ಫಿಟ್ಟರ್ ಹುದ್ದೆ- 20

ಜನರಲ್ ಮೆಕ್ಯಾನಿಕ್ ಫಿಟ್ಟರ್- 18

ಫಿಟ್ಟರ್ ಎಲೆಕ್ಟ್ರಿಕಲ್ ಹುದ್ದೆ- 12

ಎಲೆಕ್ಟ್ರಿಕ್ ಫಿಟ್ಟರ್ ಹುದ್ದೆ- 4

ಶೈಕ್ಷಣಿಕ ಅರ್ಹತೆ

ಅಜ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಎಸ್​​ಎಸ್​ಎಲ್​ಸಿ ಯಲ್ಲಿ/ 10ನೇ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು.

Indian Navy Recruitment 2023: Invites application for 248 form eligible

ವಯಸ್ಸಿನ ಮಿತಿ/ ಸಂಬಳ

ಅಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ 2023ರ ಫೆಬ್ರವರಿ 27ರ ವೇಳೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು ಎಂದು ತಿಳಿಸಿದೆ. ಇನ್ನು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಸಂಬಳ - 19,900- 63,200 ಸಂಬಳ ನಿಗದಿ ಮಾಡಲಾಗಿದೆ.

ವಯಸ್ಸಿನ ಸಡಿಕೆ ಯಾರಿಗೆ ಎಷ್ಟಿದೆ?

ಹಿಂದುಳಿದ ವರ್ಗ (OBC)/ESM ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.

ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳು- 5 ವರ್ಷ

PWD (UR) ಅಭ್ಯರ್ಥಿಗಳು- 10 ವರ್ಷ

PWD (OBC) ಅಭ್ಯರ್ಥಿಗಳು- 13 ವರ್ಷ

PWD (SC/ST) ಅಭ್ಯರ್ಥಿಗಳು- 15 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕದ ವಿವರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಥವಾ ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇರುವುದಿಲ್ಲ. ಇನ್ನೂ ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 205 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಪಾವತಿಸಬೇಕು. ಫೆ.27ರ ಒಳಗೆ ಅರ್ಜಿ ಸಲ್ಲಿಸಿ ಹಣ ಪಾವತಿಸಿರಬೇಕು.

ಅಭ್ಯರ್ಥಿ ಆಯ್ಕೆ ಹೇಗೆ

ಮೊದಲು ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮಾಡಿ ನಂತರ ಶಾರ್ಟ್​​ಲಿಸ್ಟ್‌ ಮಾಡಲಾಗುತ್ತದೆ. ಇಲ್ಲಿ ಆಯ್ಕೆಯಾದವರು ನಂತರ ನಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಅಲ್ಲಿ ಪಾಸಾದವರಿಗೆ ಸಂದರ್ಶನ ನಡೆಸುವ ಮೂಲಕ ಭಾರತೀಯ ನೌಕಾಪಡೆ ಆಯ್ಕೆ ಮಾಡುವುದಾಗಿ ತಿಳಿಸಿದೆ.

English summary
Indian Navy Recruitment 2023: Invites application for 248 form eligible, Good Opportunity for 10th passers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X