ಭಾರತೀಯ ನೌಕಾಪಡೆಯಲ್ಲಿ 53 ವಿವಿಧ ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಮಾರ್ಚ್ 14: ಭಾರತೀಯ ನೌಕಾಪಡೆಯಲ್ಲಿ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಪೈಲಟ್, ಅಬ್ಸರ್ವರ್ ಸೇರಿದಂತೆ 53 ವಿವಿಧ ಹುದ್ದೆಗಳು ಖಾಲಿ ಇದ್ದು,ಅರ್ಹ ಆಸಕ್ತರು ಏಪ್ರಿಲ್ 05, 2019ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: Indian Navy
ಒಟ್ಟು ಹುದ್ದೆಗಳು: 53
ಹುದ್ದೆ ಹೆಸರು: ಪೈಲಟ್(ಎಂಆರ್), ಅಬ್ಸರ್ವರ್, ಲಾಜಿಸ್ಟಿಕ್ಸ್, ಇತ್ಯಾದಿ
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05.04.2019
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಅಥವಾ ಬಿ.ಟೆಕ್, ಎಂಎಸ್ಸಿ, ತತ್ಸಮಾನ ಅರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು. ಎಐಸಿಟಿಇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಕನಿಷ್ಟ 60% ಅಂಕಗಳನ್ನು ಪಡೆದಿರಬೇಕು.

ವಯೋಮಿತಿ: ಅಬ್ಸರ್ವರ್, ಪೈಲಟ್ ಹಾಗೂ ಇನ್ನಿತರ ಹುದ್ದೆಗಳಿಗೆ ಪ್ರತ್ಯೇಕ ವಯೋಮಿತಿ ನೀಡಲಾಗಿದೆ. ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಿ, ಅರ್ಜಿ ತುಂಬತಕ್ಕದ್ದು.
ಅರ್ಜಿ ಶುಲ್ಕ : ಯಾವುದೇ ಶುಲ್ಕ ಇಲ್ಲ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 05, 2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications