ಭಾರತೀಯ ನೌಕಾಪಡೆ ಯಲ್ಲಿ 500ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 14: ಭಾರತೀಯ ಜಲ ಸೇನೆ(Indian Navy)ಯಲ್ಲಿ 2018-19ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 500ಕ್ಕೂ ಅಧಿಕ ನಾವಿಕ(sailor) ಹುದ್ದೆಗಳಿವೆ.
Sailors for Artificer Apprentice (AA) ನ ಆಗಸ್ಟ್ 2019ರ ಬ್ಯಾಚಿಗೆ ಪ್ರವೇಶ ಬಯಸುವವರು ಡಿಸೆಂಬರ್ 14ರಿಂದ ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದು, ಡಿಸೆಂಬರ್ 30 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳು : ಅಂದಾಜು 500
ಹುದ್ದೆ ಹೆಸರು: Sailors
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 30, 2018

ವಿದ್ಯಾರ್ಹತೆ : 10+2 ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಗಣಿತ ಹಾಗೂ ಭೌತಶಾಸ್ತ್ರ ಒಂದು ವಿಷಯವಾಗಿ ಓದಿರಬೇಕು. ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಕಲಿಕೆ ವಿಷಯದಲ್ಲಿರಬೇಕು.
ಸಂಬಳ ನೀರಿಕ್ಷೆ: 21 700ರಿಂದ 69100 ಪ್ರತಿ ತಿಂಗಳು
ಅರ್ಜಿ ಶುಲ್ಕ
ಎಸ್ ಸಿ/ ಎಸ್ಟಿ : ಯಾವುದೇ ಶುಲ್ಕವಿಲ್ಲ
ಇತರೆ: 250 ರು
ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾಗಬೇಕು.
ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : ಡಿಸೆಂಬರ್ 14, 2018
ಆನ್ ಲೈನ್ ಸರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 30, 2018
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications