ಭಾರತೀಯ ನೌಕಾಪಡೆಯಲ್ಲಿ ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಜೂನ್ 14 : ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಸ್ಟೆವರ್ಡ್ಸ್ ಹಾಗೂ ಹೈಜೀನಿಸ್ಟ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇಚ್ಚೆಯುಳ್ಳ ಅಭ್ಯರ್ಥಿಗಳು 2017 ಜೂನ್ 26ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ: ಸ್ಟೆವರ್ಡ್ಸ್ ಹಾಗೂ ಹೈಜೀನಿಸ್ಟ್ (ಭಾರತೀಯ ನೌಕಾಪಡೆ)
ಹುದ್ದೆ ಎಲ್ಲಿ?: ಭಾರತದಾದ್ಯಂತ
ವೇತನ ಶ್ರೇಣಿ: 21700 43100 ರು. ತಿಂಗಳಿಗೆ.

ವಿದ್ಯಾರ್ಹತೆ: ಸ್ಟೆವರ್ಡ್ಸ್ ಹಾಗೂ ಹೈಜೀನಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಮಂಡಳಿಗಳಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ತೇರ್ಗಡೆಯಾಗಿರಬೇಕು.
ವಯೋಮಿತಿ: 01 ಏಪ್ರಿಲ್ 1997ರಿಂದ ಮಾರ್ಚ್ 31, 2001ರೊಳಗೆ ಜನಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆ ವಿಧಾನ: ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications