ಭಾರತೀಯ ಸೇನೆಯಲ್ಲಿ ಕಾನೂನು ಪದವೀಧರರಿಗೆ ಹುದ್ದೆಗಳಿವೆ
ಬೆಂಗಳೂರು, ಫೆಬ್ರವರಿ 06: ಭಾರತೀಯ ಭೂ ಸೇನೆಯಲ್ಲಿ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಕಾನೂನು ಪದವೀಧರರು ಅರ್ಜಿ ಸಲ್ಲಿಸಬಹುದು.
ಸಂಸ್ಥೆ : ಭಾರತೀಯ ಭೂ ಸೇನೆ
ಒಟ್ಟು ಹುದ್ದೆ: 14
ಹುದ್ದೆ ಹೆಸರು: ಕಾನೂನು ಪದವೀಧರ
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರವರಿ 14,2019.

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಶೇ 55ರಷ್ಟು ಅಂಕಗಳೊಂದಿಗೆ ಎಲ್ ಎಲ್ ಬಿ ಪದವಿ(3 ವರ್ಷಗಳ ಪದವಿ ಅಥವಾ 10+2 ನಂತರ ಐದು ವರ್ಷ). ಭಾರತದ ರಾಜ್ಯವೊಂದರ ಬಾರ್ ಕೌನ್ಸಿಲ್ ನಲ್ಲಿ ಅಡ್ವೋಕೇಟ್ ಆಗಿ ನೋಂದಾಯಿತರಾಗಿರಬೇಕು. ಬಾರ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರಬೇಕು.
ವಯೋಮಿತಿ: ಜುಲೈ 01, 2019ರ ಅನ್ವಯ 21 ರಿಂದ 27 ವರ್ಷ
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರವರಿ 14, 2019
ನೇಮಕಾತಿ ಪ್ರಕ್ರಿಯೆ: ಎಸ್ಎಸ್ ಬಿ ಸಂದರ್ಶನ, ವೈದ್ಯಕೀಯ ಪರೀಕ್ಷೆ, ದೈಹಿಕ ಪರೀಕ್ಷೆ.
ಸಂಬಳವಿವರ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಗಳನ್ನು ತಿಳಿಯಲು ಕ್ಲಿಕ್ ಮಾಡಿ












Click it and Unblock the Notifications