Indian Army Recruitment: ರಕ್ಷಣಾ ಇಲಾಖೆ ವ್ಯಾಪ್ತಿಯ 625 ಹುದ್ದೆಗಳ ನೇಮಕಾತಿ, ಅರ್ಜಿ ಹಾಕಿ

ನವದೆಹಲಿ, ಡಿಸೆಂಬರ್ 27: ಭಾರತೀಯ ಸೇನೆಯಲ್ಲಿ ಉದ್ಯೋಗ ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೋಂದು ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಅದರಲ್ಲೂ ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಬಯಸುವವರು ಕೂಡಲೇ ಇಲ್ಲಿ ಕರೆಯಲಾದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಜನವರಿ 09 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಭಾರತೀಯ ಸೇನೆಯ ಡೈರೆಕ್ಟರೇಟ್ ಜನರಲ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ನಿರ್ದೇಶನಾಲಯವು (DGEME) 625 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Indian Army DG EME Group C Recruitment Application invited For 625 Posts

ಭಾರತೀಯ ಸೇನೆಯ DG EME ಗ್ರೂಪ್ ಸಿ ವೃಂದದಲ್ಲಿ ಫಾರ್ಮಸಿಸ್ಟ್, ಲೋವರ್ ಡಿವಿಶನ್ ಕ್ಲರ್ಕ್, ಫೈರ್ ಮ್ಯಾನ್, ವೆಹಿಕಲ್ ಮೆಕ್ಯಾನಿಕ್ ಹಾಗೂ ಇನ್ನಿತರ ಹುದ್ದೆಗಳು ಸೇರಿದಂತೆ ಒಟ್ಟು 600ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆ ಹೇಗೆ, ಮಾನದಂಡಗಳು, ಮಾಸಿಕ ವೇತನ, ವಿದ್ಯಾರ್ಹತೆ ಇನ್ನಿತರ ಮಾಹಿತಿ ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: DGEME

ಹುದ್ದೆಗಳ ಹೆಸರು: ಎಲೆಕ್ಟ್ರಿಷಿಯನ್ ಹೈಲಿ ಸ್ಕಿಲ್ಡ್-2, ಅಗ್ನಿಶಾಮಕ ಸಿಬ್ಬಂದಿ, ಟ್ರೇಡ್ಸ್‌ಮ್ಯಾನ್ ಮೇಟ್, ಫಾರ್ಮಾಸಿಸ್ಟ್, ಲೋವರ್ ಡಿವಿಷನ್ ಕ್ಲರ್ಕ್, ವೆಹಿಕಲ್ ಮೆಕ್ಯಾನಿಕ್.

ಒಟ್ಟು ಹುದ್ದೆಗಳು: 625

ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್

ಪೋಸ್ಟಿಂಗ್: ದೇಶಾದ್ಯಂತ

ಅರ್ಜಿ ಸಲ್ಲಿಕೆ ಕೊನೆ ದಿನ: ಜನವರಿ 09

ಅರ್ಜಿ ಶುಲ್ಕ: ಇಲ್ಲ

ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ

ಭಾರತೀಯ ಸೇನೆಯ ಡೈರೆಕ್ಟರೇಟ್ ಜನರಲ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ನಿರ್ದೇಶನಾಲಯ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು SSLC, PUC, BSc ಮತ್ತು ಹಾಗೂ ಡಿಪ್ಲೋಮ ಪದವಿ ಪಡೆದಿರುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳಿಗೆ ಕನಿಷ್ಠ 18 ಗರಿಷ್ಠ ವಯಸ್ಸು 30 ವರ್ಷವೆಂದು ನಿಗದಿ ಪಡಿಸಲಾಗಿದೆ. ಜಾತಿ ಆಧಾರದಲ್ಲಿ ಅಭ್ಯರ್ಥಿಗಳಿಗೆ ಒಂದಷ್ಟು ಸಡಿಲಿಕೆ ಸಿಗಲಿದೆ. ವಯೋಮಿತಿಯಲ್ಲಿನ ಸಡಿಲಿಕೆ ನೋಡುವುದಾದರೆ OBC ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರಲಿದೆ. ವಿಶೇಷ ಚೇತನ ಅಭ್ಯರ್ಥಿಗಳಿಗೆ 15 ವರ್ಷ ಸಡಿಲಿಕೆ ಸಿಗಲಿದೆ.

ಆಯ್ಕೆ ಪ್ರಕ್ರಿಯೆ ಹೇಗೆ: ಮಾಸಿಕ ವೇತನ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಬಳಿಕ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಇದೆಲ್ಲದರಲ್ಲಿ ಆಯ್ಕೆ ಆಗಿ ಶಾರ್ಟ್ ಲಿಸ್ಟ್ ಆಗುವವರಿಗೆ ಮುಂದಿನ ಪ್ರಕ್ರಿಯೆ ಆದ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.

ನೆನಪಿಡಬೇಕಾದ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ: 2024 ಡಿಸೆಂಬರ್ 21

ಅರ್ಜಿ ಸಲ್ಲಿಕೆ ಅಂತಿಮ ದಿನ: 2025 ಜನವರಿ 9

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+