Post Office Recruitment: ಭರ್ಜರಿ 1,940 ಹುದ್ದೆಗಳಿಗೆ ನೇಮಕಾತಿ, SSLC ಪಾಸಾದವರು ಅರ್ಜಿ ಹಾಕಿ
ಬೆಂಗಳೂರು, ಜುಲೈ 17: ಭಾರತೀಯ ಅಂಚೆ ಇಲಾಖೆ (India Post Office) ಬೃಹತ್ ಪ್ರಮಾಣದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಬಹುನಿರೀಕ್ಷಿತ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭಾರತ ದೇಶಾದ್ಯಂತ ಸುಮಾರು 44,228 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಕರ್ನಾಟಕ ರಾಜ್ಯದಲ್ಲಿ 1,940 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಅಂಚೆ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು ಎಂದುಕೊಂಡವರಿಗೆ ಇದು ಸೂಕ್ತ ಸಮಯವಾಗಿದೆ. ಅರ್ಹರಿಗೆ ಆಗಸ್ಟ್ 5 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.

ಅಂಚೆ ಇಲಾಖೆಯಲ್ಲಿ ಗ್ರಾಮೀಣ ಡಾಕ್ ಸೇವಕ್ (ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್) ಹುದ್ದೆಗಳು ಖಾಲಿ ಇವೆ. ಇವುಗಳಿಗೆ ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ವೇತನ, ಇನ್ನಿತರ ನೇಮಕಾತಿ ಮಾಹಿತಿ ಇಲ್ಲಿ ತಿಳಿಯಿರಿ.
ಅಂಚೆ ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಭಾರತೀಯ ಅಂಚೆ ಇಲಾಖೆ
ಹುದ್ದೆ ಹೆಸರು: ಗ್ರಾಮೀಣ ಡಾಕ್ ಸೇವಕ್
ಒಟ್ಟು ಹುದ್ದೆಗಳು: 1,940 ಹುದ್ದೆ
ಪೋಸ್ಟಿಂಗ್: ಕರ್ನಾಟಕ
ಅರ್ಜಿ ಸಲ್ಲಿಕೆ ಕೊನೆ ದಿನ: ಆಗಸ್ಟ್ 05
ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ವಿವರ
ಬೆಂಗಳೂರು ಜಿಪಿಒ 4, ಬೆಳಗಾವಿ 33, ಬೆಂಗಳೂರು ಪೂರ್ವ 83, ಬೆಂಗಳೂರು ದಕ್ಷಿಣ 62, ಬೆಂಗಳೂರು ಪಶ್ಚಿಮ 39, ಬಾಗಲಕೋಟೆ 23, ಬಳ್ಳಾರಿ 50, ಬೀದರ್ 59, ಚನ್ನಪಟ್ಟಣ 87, ಚಿಕ್ಕಮಗಳೂರು 60, ಹಾವೇರಿ 44, ಕಲಬುರಗಿ 83, ಕಾರವಾರ 43, ಕೊಡಗು 76, ಕೋಲಾರ 106, ಕೊಪ್ಪಳ 36 ಹುದ್ದೆಗಳು.
ಚಿಕ್ಕೋಡಿ 19, ಚಿತ್ರದುರ್ಗ 27, ದಾವಣಗೆರೆ ಕಚೇರಿ 40, ಗೋಕಾಕ್ 7, ಹಾಸನ 78,ಮಂಡ್ಯ 65, ಮಂಗಳೂರು 62, ಮೈಸೂರು 42, ನಂಜನಗೂಡು 66, ಉಡುಪಿ 90, ವಿಜಯಪುರ 40, ಯಾದಗಿರಿ 50 ಪುತ್ತೂರು 89, ರಾಯಚೂರು 63, ಆರ್‌ಎಂಎಸ್ ಎಚ್‌ಬಿ 3, ಆರ್‌ಎಂಎಸ್ ಕ್ಯೂ 9, ಶಿವಮೊಗ್ಗ 89, ಶಿರಸಿ 66, ತುಮಕೂರು 107, ಧಾರವಾಡ 22, ಗದಗ 18 ಹುದ್ದೆಗಳು ಖಾಲಿ ಇವೆ ಎಂದು ಅಂಚೆ ಇಲಾಖೆ ಅಧಿಸೂಚನೆ ತಿಳಿಸಿದೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೇಶದ ಯಾವುದೇ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆಯಲ್ಲಿ (ಇಂಗ್ಲಿಷ್ ಮತ್ತು ಗಣಿತ ವಿಷಯ ಒಳಗೊಂಡಿರುವುದು ಕಡ್ಡಾಯ) ಉತ್ತೀರ್ಣವಾಗಿರಬೇಕು ಎಂದು ತಿಳಿಸಲಾಗಿದೆ.

ವಯೋಮಿತಿ ಮಾಹಿತಿ
ಅರ್ಜಿ ಸಲ್ಲಿಸಬಯಸುವ ವ್ಯಕ್ತಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಿನ ಮಿತಿ ಇದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಸಲ್ಲಿಸುವ ಸಾಮಾನ್ಯ / ಒಬಿಸಿ ವರ್ಗದ ಅಭ್ಯರ್ಥಿಗಳು 100 ರೂ. ಶುಲ್ಕ ಇರಲಿದೆ. ಇವರ ಹೊರತು ಎಸ್‌ಸಿ / ಎಸ್‌ಟಿ / ಅಂಗವಿಕಲ ವಿಭಾಗದ ಮತ್ತು ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಅವರು ಪಡೆದ 10ನೇ ತರಗತಿಯಲ್ಲಿನ ಅಂಕಗಳ (ಮೆರಿಟ್) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್-12,000 ರೂ.29,380 ರೂ., ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್-10,000 ರೂ. - 24,470 ರೂ. ಮಾಸಿಕ ವೇತನ ಸಹಿತ ಆಯಾ ಜಿಲ್ಲೆಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ, ವಿಳಾಸ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ನೀಡಲಾಗಿರುವ ವೆಬ್‌ಸೈಟ್ https://indiapostgdsonline.gov.in/ ಭೇಟಿ ನೀಡಿ ಹೆಸರು ನೋಂದಾಯಿಸಿ. ಲಾಗಿನ್ ಆಗಿ ವಿವರ ನಮೂದಿಸಿ ಸೂಕ್ತ ದಾಖಲೆಗಳ ಸಹಿತ ಅರ್ಜಿ ಭರ್ತಿ ಮಾಡಬೇಕು. ನಿಗದಿ ಅಭ್ಯರ್ಥಿಗಳು ಮಾತ್ರವೇ ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಅದೇ ವೆಬ್‌ಸೈಟ್‌ನಲ್ಲಿ ಸಿಗುವ ಅಧಿಸೂಚನೆ ಓದಿಕೊಳ್ಳಬಹುದಾಗಿದೆ.











Click it and Unblock the Notifications