IIIT Raichur Recruitment 2023: ರಾಚಯೂರಿನಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ, ವಿವರ ನೋಡಿ

ಬೆಂಗಳೂರು, ಸೆಪ್ಟಂಬರ್ 11: ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಇನ್ಫಾರ್ಮೇಶನ್ ಟೆಕ್ನಾಲಜಿ ರಾಯಚೂರು (IIIT Raichur) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳಿಂದ ಈ ಕೂಡಲೇ ಅರ್ಜಿ ಸಲ್ಲಿಸಬೇಕು. ರಾಯಚೂರಿನಲ್ಲಿಯೇ ಪೋಸ್ಟಿಂಗ್ ಸಿಗಲಿದೆ.

ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಇನ್ಫಾರ್ಮೇಶನ್ ಟೆಕ್ನಾಲಜಿ ರಾಯಚೂರು (IIIT Raichur) ನಲ್ಲಿ ವಿವಿಧ ಅಸಿಸ್ಟೆಂಟ್ ಲೈಬ್ರರಿಯನ್​ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ತಿಂಗಳ ಸೆಪ್ಟೆಂಬರ್ 25 ನೇರ ಸಂದರ್ಶನ ಮೂಲಕ ಭಾಗವಹಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

iiit-raichur-recruitment-2023

ನೇಮಕಾತಿ ಪೂರ್ಣ ವಿವರ

ಸಂಸ್ಥೆ: IIIT ರಾಯಚೂರು

ಹುದ್ದೆ ಹೆಸರು: ಅಸಿಸ್ಟೆಂಟ್ ಲೈಬ್ರರಿಯನ್

ಮಾಸಿಕ ವೇತನ: 30,000 ರೂಪಾಯಿ

ಉದ್ಯೋಗದ ಸ್ಥಳ -ರಾಯಚೂರು

ಸಂದರ್ಶನ ದಿನಾಂಕ - ಸೆಪ್ಟೆಂಬರ್ 25

ವಿದ್ಯಾರ್ಹತೆ ಏನಿರಬೇಕು

ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿಬೇಕು. ಅಂತವರನ್ನು ಆಯ್ಕೆ ಮಾಡಿ ರಾಯಚೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುವುದು ಎಂದು ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಇನ್ಫರ್ಮೇಶನ್ ಟೆಕ್ನಾಲಜಿ ಅಧಿಸೂಚನೆ ತಿಳಿಸಿದೆ.

iiit-raichur-recruitment-2023

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸಬಯುವ ಅಭ್ಯರ್ಥಿಗಳು ವಯಸ್ಸು ನಿಯಮಾನುಸಾರ ಇರಬೇಕ ಎಂದು ಹೇಳಲಾಗಿದೆ. ಅಭ್ಯರ್ಥಿಗಳ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ ಎಂದಷ್ಟೇ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಒಮ್ಮೆ ಪೂರ್ತಿ ಅಧಿಸೂಚನೆ ಓದಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಹೇಗೆ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ಇಲ್ಲಿ ಆಯ್ಕೆ ಆಗುವವರಿಗೆ ನಂತರ ನೇರವಾಗಿ ಸೆಪ್ಟಂಬರ್ 25ರಂದು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಸಂದರ್ಶನವಯ, ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಇನ್ಫಾರ್ಮೇಶನ್ ಟೆಕ್ನಾಲಜಿ (IIIT Raichur) ಕ್ಯಾಂಪಸ್ ಜಿಇಸಿ ಕ್ಯಾಂಪಸ್, ಯರಮರಸ್ ಕ್ಯಾಂಪ್, ರಾಯಚೂರು-584135 ಇಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+