IIIT Raichur Recruitment 2023: 19 ಖಾಲಿ ಹುದ್ದೆಗಳಿಗೆ ಮಾರ್ಚ್ 31ರೊಳಗೆ ಕೂಡಲೇ ಅರ್ಜಿ ಹಾಕಿ
ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಸಂಸ್ಥೆ ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕೂಡಲೇ ಅರ್ಜಿ ಸಲ್ಲಿಸಿ.
ರಾಯಚೂರು, ಮಾರ್ಚ್ 09: ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಸಂಸ್ಥೆ ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮಾರ್ಚ್ 31ರೊಳಗೆ ಇ ಮೇಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಸಂಸ್ಥೆಯಲ್ಲಿ ಒಟ್ಟು 19 ಫ್ಯಾಕಲ್ಟಿ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಿದ್ದು, ಆಯ್ಕೆಯಾದವರಿಗೆ ಜಿಲ್ಲೆಯಲ್ಲೇ ಪೊಸ್ಟಿಂಗ್ ನೀಡಲಾಗುವುದು ಎಂದು ಸಂಸ್ಥೆಯ ಅಧಿಸೂಚನೆ ತಿಳಿಸಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ, ಅಭ್ಯರ್ಥಿಗಳ ಮಾಹಿತಿ, ವಯೋಮಿತಿ, ಸಂಬಳ ಇನ್ನಿತರ ಅತ್ಯಗತ್ಯ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಹುದ್ದೆಗಳ ಸಂಪೂರ್ಣ ವಿವರ
ಹುದ್ದೆ ಹೆಸರು- ಫ್ಯಾಕಲ್ಟಿ
ಖಾಲಿ ಹುದ್ದೆ -19
ಶೈಕ್ಷಣಿಕ ಅರ್ಹತೆ - ಪಿಎಚ್.ಡಿ
ವೇತನ- ನಿಗದಿ ಆಗಿಲ್ಲ

ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ ಸಂಸ್ಥೆ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಎಚ್.ಡಿ ಪಡೆದಿರಬೇಕು ಎಂದು ತಿಳಿಸಿದೆ.
ವಯಸ್ಸು, ವೇತನ, ಉದ್ಯೋಗ ಸ್ಥಳ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಮೀಸಲಾತಿ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಇನ್ನೂ ಹುದ್ದೆಗೆ ಸಂಬಂಧಿಸಿದಂತೆ ವೇತನ ನಿಗದಿ ಮಾಡಿಲ್ಲ. ರಾಯಚೂರಿನಲ್ಲೇ ಉದ್ಯೋಗ ಸ್ಥಳ ನೀಡಲಾಗುವುದು ಸಂಸ್ಥೆ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಆಯ್ಕೆ ಯಾಗುವ ಅಭ್ಯರ್ಥಿಗಳಿಗೆ ನಂತರ ನೇರ ಸಂದರ್ಶನ ಇರಲಿದೆ. ಅರ್ಜಿ ಸಲ್ಲಿಸುವವರು ಭರ್ತಿ ಮಾಡಿದ ಅರ್ಜಿಯನ್ನು ಇ-ಮೇಲ್ ಐಡಿ [email protected] ಗೆ ಇದೇ ಮಾರ್ಚ್ 31ರೊಳಗೆ ಕಳುಹಿಸಬೇಕು.
ಅರ್ಜಿ ಪಡೆಯಬೇಕಾದಲ್ಲಿ, ಅಧಿಸೂಚನೆ ಓದಲು ಹಾಗೂ ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್ ಗೆ https://www.karnatakacareers.in/iiit-raichur-recruitment-2023-apply-online-for-01-assistant-registrar/ ಭೇಟಿ ನೀಡಬಹುದು.












Click it and Unblock the Notifications