IDBI Bank Recruitment 2023: ವಿವಿಧ 600 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ವಿಧಾನ, ವೇತನ ಬಗ್ಗೆ ತಿಳಿಯಿರಿ

ಬೆಂಗಳೂರು, ಸೆಪ್ಟಂಬರ್ 15: ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (IDBI) ಸಂಸ್ಥೆ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (IDBI) ಸಂಸ್ಥೆಯಲ್ಲಿ ಒಟ್ಟು 600 ಕಿರಿಯ ಸಹಾಯಕ ವ್ಯವಸ್ಥಾಪಕರ (ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್) ಹುದ್ದೆಗಳು ಖಾಲಿ ಇವೆ. ಆಸಕ್ತರು ಇದೇ ಸೆಪ್ಟೆಂಬರ್ 30ರೊಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ನೇಮಕಾತಿ, ವೇತನ, ವಯೋಮಿತಿ ಇನ್ನಿತರ ವಿವರಗಳನ್ನು ಇಲ್ಲಿ ತಿಳಿಯಿರಿ.

IDBI Bank Recruitment 2023: IDBI Will Be Appoint Candidated To 600 Posts

ನೇಮಕಾತಿ ಪ್ರಕ್ರಿಯೆ

ಸಂಸ್ಥೆ ಹೆಸರು: ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

ಹುದ್ದೆ ಹೆಸರು: ಕಿರಿಯ ಸಹಾಯಕ ವ್ಯವಸ್ಥಾಪಕ

ಖಾಲಿ ಹುದ್ದೆ ಸಂಖ್ಯೆ: 600

ವೇತನ: 6,14,000ರಿಂದ 6,50,000 (ರೂ.ಪ್ಯಾಕೇಜ್)

ಉದ್ಯೋಗ ಸ್ಥಳ: ಭಾರತ

ಅರ್ಜಿ ಸಲ್ಲಿಕೆ ಕಡೆ ದಿನಾಂಕ: ಸೆಪ್ಟೆಂಬರ್ 30

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ವಯಸ್ಸಿನ ಮಿತಿ: ಸಡಿಲಿಕೆ ವಿವರ

ಅರ್ಜಿ ಸಲ್ಲಿಸುವವರಿಗೆ ವಯಸ್ಸು ಇದೇ ವರ್ಷ ಕಳೆದ ಆಗಸ್ಟ್ 31 ಕನಿಷ್ಠ 20 ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು. ಇನ್ನೂ ಒಬಿಸಿ (NCL) ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ PWBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

IDBI Bank Recruitment 2023: IDBI Will Be Appoint Candidated To 600 Posts

ಉದ್ಯೋಗ ಸ್ಥಳ: ಅರ್ಜಿ ಶುಲ್ಕದ ಮಾಹಿತಿ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿಯಾದರೂ ಪೊಸ್ಟಿಂಗ್ ನೀಡಲಾಗುವುದು. ಈ ಅವಕಾಶ ಉಪಯೋಗಿಸಿಕೊಳ್ಳಬೇಕು. ಕೂಡಲೇ ಅರ್ಜಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ-ಪಂಗಡ/PWBD ಅಭ್ಯರ್ಥಿಗಳಿಗೆ 200 ರೂ.

ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 1000 ರೂಪಾಯಿ ಅರ್ಜಿ ಶುಲ್ಕ ಇದ್ದು, ಅದನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸುವವರಿಗೆ ಮೊದಲು ಆನ್​ಲೈನ್ ಮೂಲಕವೇ ಪರೀಕ್ಷೆ ನಡೆಸಲಾಗುವುದು. ನಂತರ ವೈಯಕ್ತಿಕ ಸಂದರ್ಶನ ಇರಲಿದೆ.

ನೆನಪಿಡಬೇಕಾದ ದಿನಾಂಕ

ಅರ್ಜಿ ಸಲ್ಲಿಕೆ ಆರಂಭ - ಸೆಪ್ಟಂಬರ್ 15

ಅರ್ಜಿ ಸಲ್ಲಿಕೆಗೆ ಕೊನೆ ದಿನ - ಸೆಪ್ಟೆಂಬರ್ 30

ಆನ್​ಲೈನ್ ಪರೀಕ್ಷಾ ದಿನಾಂಕ - ಅಕ್ಟೋಬರ್ 20

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+