IBPS Banking Jobs: ವಿವಿಧ ಬ್ಯಾಂಕ್‌ಗಳಲ್ಲಿನ 4,455 ಖಾಲಿ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ
ಬೆಂಗಳೂರು, ಆಗಸ್ಟ್ 01: ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ತನ್ನ ವ್ಯಾಪ್ತಿಯಲ್ಲಿನ ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
IBPS ಪ್ರಕಾರ, ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಬರೋಬ್ಬರಿ 4,455 ಖಾಲಿ ಇರುವ ಪ್ರೊಬೇಷನರಿ ಅಧಿಕಾರಿಗಳು/ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಹರು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಆಗಸ್ಟ್ 1ರಿಂದ ಆಗಸ್ಟ್ 21ರವರೆಗೆ ನೇಮಕಾತಿ ನಡೆಯಲಿದೆ. ಈ ಬ್ಯಾಂಕಿಂಗ್ ಸಂಬಂಧಿ ಪೂರ್ವಭಾವಿ ಪರೀಕ್ಷೆಗಳು ಅಕ್ಟೋಬರ್ 19 ಮತ್ತು 20 ರಂದು ನಿಗದಿಪಡಿಸಲಾಗಿದೆ. ಈ ಖಾಲಿ ಹುದ್ದೆಗಳ ಕುರಿತು ಪ್ರಮುಖ ಪರೀಕ್ಷೆಯು ನವೆಂಬರ್ 30 ರಂದು ಜರುಗಲಿದೆ. ಪರೀಕ್ಷೆಯಲ್ಲಿ ಶಾರ್ಟ್ ಲಿಸ್ಟ್ ಆಗುವ ಅಭ್ಯರ್ಥಿಗಳ ಸಂದರ್ಶನವು 2025 ಜನವರಿ ಇಲ್ಲವೇ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಐಬಿಪಿಎಸ್ ತಿಳಿಸಿದೆ.
ಬ್ಯಾಂಕಿಂಗ್ ಹುದ್ದೆಗಳ ಅರ್ಜಿ ಶುಲ್ಕ ವಿವರ
ಆಸಕ್ತ ಅಭ್ಯರ್ಥಿಗಳ ಪೈಕಿ ಸಾಮಾನ್ಯ ವರ್ಗ, ಹಿಂದುಳಿದ ವರ್ಗ (OBC) ಮತ್ತು EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 850 ರೂ.ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ PWD ವರ್ಗದ ಅಭ್ಯರ್ಥಿಗಳು 175 ರೂಪಾಯಿ ನಿಗದಿ ಮಾಡಲಾಗಿದೆ.
ವಯೋಮಿತಿ ವಿವರ
ಐಬಿಪಿಎಸ್ ನಡೆಸುವ ಸಾವಿರಾರು ಹುದ್ದೆಗಳ ನೇಮಕಾತಿಗೆ ಒಳಪಡುವು ಅಭ್ಯರ್ಥಿಗಳು ಇದೇ ಆಗಸ್ಟ್ 1ಕ್ಕೆ 20 ರಿಂದ 30 ವರ್ಷ ವಯಸ್ಸಾಗಿರಬೇಕು. ಜಾತಿ ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಿದರು.

ಯಾವೆಲ್ಲ ಬ್ಯಾಂಕ್‌ಗಳಲ್ಲಿ ಎಷ್ಟು ಹುದ್ದೆಗಳಿವೆ?
* ಪಂಜಾಬ್ ನ್ಯಾಷನಲ್ ಬ್ಯಾಂಕ್ - 200 ಹುದ್ದೆಗಳು
* ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ - 360 ಹುದ್ದೆಗಳು
* ಬ್ಯಾಂಕ್ ಆಫ್ ಇಂಡಿಯಾ (BOI) - 885 ಹುದ್ದೆಗಳು
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI)- 2,000 ಹುದ್ದೆಗಳು
* ಇಂಡಿಯನ್ ಓವರ್‌ಸೀಸ್ ಬ್ಯಾಂಕ್- 260 ಹುದ್ದೆಗಳು
* ಕೆನರಾ ಬ್ಯಾಂಕ್ - 750 ಹುದ್ದೆಗಳು
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಸ್ಥೆಯು ಮೊದಲು ಪೂರ್ವಭಾವಿ ಲಿಖಿತ ಪರೀಕ್ಷೆ ನಡೆಸುತ್ತದೆ. ಅಲ್ಲಿ ಆಯ್ಕೆ ಆಗುವವರಿಗೆ ನಂತರ ಸಂದರ್ಶನ, ದಾಖಲೆ ಪರಿಶೀಲನೆ (DV) ನಡೆಸಿ ಕೊನೆಗೆ ವೈದ್ಯಕೀಯ ಪರೀಕ್ಷೆ ಮಾಡಿ ಆಯ್ಕೆ ಮಾಡುವುದಾಗಿ ತಿಳಿಸಿದೆ. ಇನ್ನೂ ಈ ಲಿಖಿತ ಪರೀಕ್ಷೆಗಳು ತಲಾ 100 ಅಂಕ ಹೊಂದಿರುತ್ತವೆ.
ಅಭ್ಯರ್ಥಿಗಳ ವಿದ್ಯಾರ್ಹತೆ ಏನಿರಬೇಕು?
ಆಸಕ್ತ ಅಭ್ಯರ್ಥಿಗಳು ಅದರಲ್ಲೂ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಪರೀಕ್ಷೆ ವೇಳೆ ಬೇಕಾದ ದಾಖಲೆಗಳ ಮಾಹಿತಿ
ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಘೋಷಣೆ ಆದ ದಿನಾಂಕ ಹಾಗೂ ಅವಧಿಗೆ ನಿಗದಿಯಾದ ಪತ್ರ (ಕರೆ ಪತ್ರ). ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆ ದೃಢೀಕರಿಸಿದ/ಮುದ್ರಾಂಕಿತ ಪತ್ರ, ಗುರುತಿನ ಚೀಟಿ, ದೃಢೀಕರಿಸಿದ/ಸ್ಟ್ಯಾಂಪ್ ಮಾಡಿದ ಪ್ರತಿ ಸಹಿತ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು.
ನಿಗದಿತ ಸಮಯಕ್ಕಿಂತ ಮೊದಲೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿರಬೇಕು ಎಂದು ಐಬಿಪಿಎಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications