IBM: ಚೀನಾದಲ್ಲಿ ಐಬಿಎಂಗೆ ಬೀಗ, ಬೆಂಗಳೂರಿಗೆ ಬರಲಿದೆ 1 ಸಾವಿರ ಉದ್ಯೋಗಿಗಳ ಕಛೇರಿ

ಬೆಂಗಳೂರು, ಆಗಸ್ಟ್ 27: ಚೀನಾದಲ್ಲಿರುವ ಸಂಶೋಧನಾ ವಿಭಾಗದ ಕಛೇರಿಯನ್ನು ಐಬಿಎಂ ಬಂದ್ ಮಾಡಲಿದೆ. ಇದರಿಂದಾಗಿ ಸುಮಾರು 1 ಸಾವಿರ ಉದ್ಯೋಗಿಗಳ ಕೆಲಸದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಛೇರಿ ಮುಚ್ಚಲಿದ್ದು, ಬೆಂಗಳೂರಿನಂತಹ ನಗರದಲ್ಲಿ ಈ ಕಛೇರಿಯನ್ನು ತೆರೆಯಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.

ಬೀಜಿಂಗ್‌ನ ಕೆಲವು ನೀತಿಗಳ ಕಾರಣಕ್ಕೆ ವಿವಿಧ ಕಂಪನಿಗಳು ಚೀನಾ ಬಿಟ್ಟು ಬೇರೆ ದೇಶಗಳ ಕಡೆ ಮುಖ ಮಾಡುತ್ತಿವೆ. ವಾಲ್‌ಸ್ಟ್ರೀಟ್ ವರದಿಯ ಪ್ರಕಾರ ಮೊರ್ಗನ್ ಸ್ಟ್ಯಾನಿ ಬಳಿಕ ಐಬಿಎಂ ಚೀನಾದಿಂದ ಬೇರೆ ದೇಶದತ್ತ ಮುಖ ಮಾಡಿದ ಕಂಪನಿಯಾಗಿದೆ. ವಿವಿಧ ಕಂಪನಿಗಳು ಚೀನಾದಲ್ಲಿನ ಕಛೇರಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವತ್ತ ಚಿಂತನೆ ನಡೆಸಿವೆ.

IBM May Close Its R And D Operations In China One Thousand Job Cut

ಚೀನಾದಲ್ಲಿರುವ ಐಬಿಎಂನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಛೇರಿಯನ್ನು ಮುಚ್ಚಿ, ಬೇರೆ ದೇಶಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವ ಹಲವು ಹಿರಿಯ ಉದ್ಯೋಗಿಗಳಿಗೆ ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದೆ. ಕಛೇರಿ ಬೆಂಗಳೂರಿಗೆ ಸ್ಥಳಾಂತರವಾಗಲಿದೆ ಎಂದು ವರದಿ ತಿಳಿಸಿದೆ.

1 ಸಾವಿರ ಉದ್ಯೋಗ ಕಡಿತ: ಐಬಿಎಂ ಚೀನಾದಲ್ಲಿರುವ ಐಬಿಎಂನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಮುಚ್ಚಿದರೆ ಸುಮಾರು 1 ಸಾವಿರ ಉದ್ಯೋಗ ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ. ಶಾಂಘೈ, ಬೀಜಿಂಗ್ ಸೇರಿದಂತೆ ವಿವಿಧ ನಗರದ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್‌ ಎಂಬ ಚೀನಾದ ಮಾಧ್ಯಮ ಸಹ ಈ ಉದ್ಯೋಗ ಕಡಿತದ ಕುರಿತು ವರದಿ ಮಾಡಿದೆ. ಚೈನಾ ಅಭಿವೃದ್ಧಿ ಲ್ಯಾಬ್, ಚೈನಾ ಸಿಸ್ಟಮ್ ಲ್ಯಾಬ್ ಎಂಬ ಎರಡು ಕಛೇರಿಗಳನ್ನು ಮುಚ್ಚಲಿದ್ದು, ಇದರಿಂದಾಗಿ ಕಛೇರಿಗಳು ಇರುವ ಭಾಗದ ಸುಮಾರು 1 ಸಾವಿರ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದೆ.

ವರದಿಯಲ್ಲಿ ಈ ಕಛೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಉಲ್ಲೇಖಿಸಲಾಗಿದೆ. ಸೋಮವಾರ ಮಧ್ಯಾಹ್ನ ನಡೆದ ಕಂಪನಿಯ ವಾರದ ಸಭೆಯಲ್ಲಿ ಉದ್ಯೋಗ ಕಡಿತ ಮಾಡುವ ಘೋಷಣೆಯನ್ನು ಮಾಡಲಾಗಿದೆ.

ಚೀನಾದ ಉದ್ಯೋಗ ಕಡಿತದ ಕುರಿತು ಐಬಿಎಂ ಖಚಿತಪಡಿಸಿದೆ ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲು ನಾವು ಬದ್ಧವಾಗಿದ್ದೇವೆ. ಚೀನಾದಲ್ಲಿ ನಾವು ಮಾಡುತ್ತಿರುವ ಬದಲಾವಣೆಗಳು ಚೀನಾ ಪ್ರದೇಶದಲ್ಲಿನ ನಮ್ಮ ಯಾವುದೇ ಗ್ರಾಹಕರ ಸೇವೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಂಪನಿಯ ಇ-ಮೇಲ್ ಹೇಳಿದೆ.

ಮತ್ತೊಂದು ಕಡೆ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿಯೂ ಐಬಿಎಂ ಕೆಲವು ಉದ್ಯೋಗಿಗಳ ಕಡಿತ ಮಾಡಲಿದೆ ಎಂಬ ವರದಿಗಳಿವೆ. ಆದರೆ ಎಷ್ಟು ಉದ್ಯೋಗ ಕಡಿತವಾಗಲಿದೆ? ಎಂಬ ಮಾಹಿತಿ ಅಧಿಕೃತವಾಗಿ ಲಭ್ಯವಿಲ್ಲ. 2023ರ ಅಂತ್ಯದಲ್ಲಿಯೇ ಕಂಪನಿಯ ಸಿಇಒ ಅರವಿಂಗ್ ಕೃಷ್ಣ ಮುಂಬರುವ ವರ್ಷದಲ್ಲಿ ಕೃತಕ ಬುದ್ಧಿಮತ್ತೆ ಆಳವಡಿಕೆಯ ಕಾರಣಕ್ಕೆ ನೇಮಕಾತಿ ಸ್ಥಗಿತಗೊಳಿಸಲಾಗುತ್ತದೆ ಎಂಬ ಹೇಳಿಕೆ ನೀಡಿದ್ದರು. ಈಗ ಇರುವ ಉದ್ಯೋಗವನ್ನೇ ಕಡಿತಗೊಳಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+