ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೇಮಕಾತಿ; ವಿವರಗಳು
ಹುಬ್ಬಳ್ಳಿ, ನವೆಂಬರ್ 15; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೌರವಧನದ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ನವೆಂಬರ್ 22 ಮತ್ತು 23ರಂದು ನೇರ ಸಂದರ್ಶನ ಆಯೋಜನೆ ಮಾಡಿದೆ.
ಮಹಾನಗರ ಪಾಲಿಕೆಯ ವಿವಿಧ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ನಡೆಯುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು 18/11/2023ರ ತನಕ ಸಲ್ಲಿಕೆ ಮಾಡಬಹುದು.

ಯಾವ, ಯಾವ ಹುದ್ದೆಗಳು; ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಅವಶ್ಯಕತೆಗನುಗುಣವಾಗಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ವೈದ್ಯರು, ಎಂ.ಬಿ.ಬಿ.ಎಸ್. ವೈದ್ಯರು ಹಾಗೂ ಸಾಮಾನ್ಯ ವೈದ್ಯರು, ಅರವಳಿಕೆ ತಜ್ಞರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು, ಎಲ್.ಡಿ.ಸಿ., ಡೇಸ್ರರ್, ವಾರ್ಡ್‌ಬಾಯ್, ಆಯಾ ಮತ್ತು ಅಂಬ್ಯುಲೆನ್ಸ್ ವಾಹನ ಚಾಲಕರುಗಳ ಹುದ್ದೆಗನ್ನು ಭರ್ತಿ ಮಾಡಲಾಗುತ್ತಿದೆ.
ಈ ಹುದ್ದೆಯನ್ನು ಮಾಸಿಕ ಗೌರವಧನ ಆಧಾರದ ಮೇಲೆ 11 ತಿಂಗಳ ಅವಧಿಗೆ ಸೇವೆಯನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಈ ಹುದ್ದೆಗಳಿಗೆ ಸಂಬಂಧಪಟ್ಟ ವಿದ್ಯಾರ್ಹತೆ ಹೊಂದಿದ ಆಸಕ್ತಿವುಳ್ಳ ಅಭ್ಯರ್ಥಿಗಳು ತಮ್ಮ ಮೂಲ ಹಾಗೂ ದೃಡೀಕೃತ ಸರ್ಟಿಫಿಕೇಟಗಳೊಂದಿಗೆ ನವೆಂಬರ್ 7 ರಿಂದ 18, 2023ರವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹು.ಧಾ.ಮ.ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಆಡಳಿತ ಕಛೇರಿ ನಂ.14ರಲ್ಲಿ ದ್ವಿತೀಯ ದರ್ಜೆ ಸಹಾಯಕರ ಹತ್ತಿರ ಹೆಸರು ನೋಂದಾಯಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ನವೆಂಬರ್ 22ರಂದು ವೈದ್ಯರು ಮತ್ತು ಅರೇ ವೈದ್ಯಕೀಯ ಸಿಬ್ಬಂದಿಗಳಿಗೆ ಮತ್ತು ನವೆಂಬರ್ 23ರಂದು ಎಲ್.ಡಿ.ಸಿ., ಡೇಸ್ಸರ್, ವಾರ್ಡಬಾಯ್, ಆಯಾ ಮತ್ತು ಅಂಬ್ಯುಲೆನ್ಸ್ ವಾಹನ ಚಾಲಕ ಹುದ್ದೆಗೆ ನೇರ ಸಂದರ್ಶನವನ್ನು ನಡೆಸಲಾಗುತ್ತಿದೆ.
ಆಸಕ್ತರು ಹೆಚ್ಚಿನ ವಿವರಗಳನ್ನು www.hdmc.mrc.gov.in ವೆಬ್‍ಸೈಟ್‌ನಲ್ಲಿ ಪಡೆದುಕೊಳ್ಳಬಹುದು.
ಅಭ್ಯರ್ಥಿಗಳಿಗೆ ಸೂಚನೆಗಳು
* ಒಬ್ಬರು ಒಂದು ಹುದ್ದೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ.
* ಸದರಿ ಹುದ್ದೆಗೆ 1/3ರಷ್ಟು ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
* ಅರ್ಜಿಯನ್ನು ಸಲ್ಲಿಕೆ ಮಾಡುವಾಗ ರೆಸ್ಯೂಮ್ ಜೊತೆ ನಡೆತೆಯ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳ ದೃಡೀಕೃತದೊಂದಿಗೆ ಹಾಗೂ ಸದರಿ ಹುದ್ದೆಗೆ ಅರ್ಹ ದಾಖಲೆಗಳ ನಕಲು ಪ್ರತಿಗಳನ್ನು ದೃಡೀಕೃತದೊಂದಿಗೆ ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು.
* ಆಯ್ಕೆ ಪ್ರಕ್ರಿಯೆಯಲ್ಲಿ ಮತ್ತು ಅಭ್ಯರ್ಥಿ ಬಗ್ಗೆ ಮಾನ್ಯ ಆಯುಕ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವರ ನಿರ್ಣಯವೇ ಅಂತಿಮವಾಗಿರುತ್ತದೆ.












Click it and Unblock the Notifications