ಎಚ್‌ಎಂಟಿ ನೇಮಕಾತಿ : 38 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಬೆಂಗಳೂರು, ಮೇ 09 : ಎಚ್‌ಎಂಟಿ 38 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 14/5/2019 ಕೊನೆಯ ದಿನವಾಗಿದೆ.

ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ಜಾಯಿಂಟ್ ಜನರಲ್ ಮ್ಯಾನೇಜರ್, ರೀಜಿನಲ್ ಮ್ಯಾನೇಜರ್ ಸೇರಿದಂತೆ 38 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಎ, ಸಿಎಂಎ, ಐಸಿಬಡ್ಲ್ಯೂಎ, ಎಂಬಿಎ, ಎಂಬಿಬಿಎಸ್ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.

HMT recruitment 2019 apply for 38 Various Vacancies

ವಯೋಮಿತಿ ವಿವರ : ಜಾಯಿಂಟ್ ಜನರಲ್ ಮ್ಯಾನೇಜರ್ (ಪ್ರೊಡಕ್ಷನ್)&ಜನರಲ್ ಮ್ಯಾನೇಜರ್/ಜಾಯಿಂಟ್ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್)& ಯೂನಿಟ್ ಸೇಲ್ಸ್ ಚೀಫ್ 53 ವರ್ಷಗಳು.

ರಿಜನಲ್ ಮ್ಯಾನೇಜರ್ (ಮಾರ್ಕೆಟಿಂಗ್) 50, ಜಾಯಿಂಟ್ ಜನರಲ್ ಮ್ಯಾನೇಜರ್ 53, ಡೆಪ್ಯೂಟಿ ಜನರಲ್ ಮ್ಯಾನೇಜರ್ 50, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಫೈನಾನ್ಸ್) 42, ಆಫೀಸರ್ (ಫೈನಾನ್ಸ್) 30, ಡೆಪ್ಯೂಟಿ ಮ್ಯಾನೇಜರ್ (ಫೈನಾನ್ಸ್) 35, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ 45, ಮ್ಯಾನೇಜರ್ (ಹ್ಯೂಮನ್ ರಿಸೋರ್ಸ್) 40, ಮೆಡಿಕಲ್ ಸೂಪರಿಟೆಡೆಂಟ್ 45, ಮೆಡಿಕಲ್ ಆಫೀಸರ್ 35 ವರ್ಷಗಳು.

ಶಾರ್ಟ್‌ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 750, ಎಸ್‌ಸಿ/ಎಸ್‌ಟಿ 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಎಲ್ಲಾ ಅಗತ್ಯ ದಾಖಲೆಗಳಿಗೆ ಸಹಿ ಮಾಡಿ, ಲಗತ್ತಿಸಿ 14/5/2019ರ ಸಂಜೆ 5.30ರೊಳಗೆ ಅಂಚೆ ಮೂಲಕ ಕಳಿಸಬೇಕು.

ವಿಳಾಸ : The Deputy General Manager (CP & HR) HMT Machine Tools Limited, HMT Bhavan, No.59, Bellary Road, BANGALORE - 560 032

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+