ಎಚ್ಎಂಟಿಯಲ್ಲಿ 25 ಟ್ರೈನಿ ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಮೇ 11: ಹಿಂದೂಸ್ತಾನ್ ಮಷಿನ್ ಟೂಲ್ಸ್ (ಎಚ್ಎಂಟಿ) ತನ್ನ ಅಧಿಕೃತ ವೆಬ್ ತಾಣದಲ್ಲಿ ವಿಶೇಷ ಟ್ರೈನಿಗಳನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿಸೂಚನೆ ಪ್ರಕಟಿಸಿದೆ. ಸುಮಾರು 25 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಮೇ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು : ಎಚ್ಎಂಟಿ ಮಷಿನ್ ಟೂಲ್ಸ್ ಲಿಮಿಟೆಡ್
ಹುದ್ದೆ ಹೆಸರು : ಸ್ಪೆಷಲಿಸ್ಟ್ ಟ್ರೈನಿ
ಹುದ್ದೆಗಳ ಸಂಖ್ಯೆ : 25
ಉದ್ಯೋಗ ಸ್ಥಳ : ಬೆಂಗಳೂರು (ಕರ್ನಾಟಕ)
ಕೊನೆ ದಿನಾಂಕ : 25ನೇ ಮೇ, 2018

ಸಂಬಳ ನಿರೀಕ್ಷೆ: 8600 - 14600/-
ವಿದ್ಯಾರ್ಹತೆ : ಎಂ.ಟೆಕ್ (ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್)
ವಯೋಮಿತಿ : 30 ವರ್ಷ (01/04/2018 ಅನ್ವಯ)
ಆಯ್ಕೆ ಪ್ರಕ್ರಿಯೆ :
ಆಯ್ಕೆಯಾದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು, ನಂತರ ವೈಯಕ್ತಿಕ ಸಂದರ್ಶನ ನಡೆಸಲಾಗುವುದು.
ಶುಲ್ಕ ವಿವರ: ಎಚ್ಎಂಟಿ ಸಂಸ್ಥೆಯ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು HMT Machine Tools Limited ಹೆಸರಿನ ಮೇಲೆ ಡಿಮ್ಯಾಂಡ್ ಡ್ರಾಫ್ಟ್ ಪಡೆಯತಕ್ಕದ್ದು.
SC/ST/PWD : ಯಾವುದೇ ಶುಲ್ಕವಿಲ್ಲ
ಇತರೆ : 500/-
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮೇ 25, 2018
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿವರಗಳಿಗೆ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications