ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ಪ್ರಾಜೆಕ್ಟ್ ಬಂದ್, 350 ಎಚ್‌ಸಿಎಲ್ ಟೆಕ್ಕಿಗಳಿಗೆ ಪಿಂಕ್ ಸ್ಲಿಪ್

|
Google Oneindia Kannada News

ಬೆಂಗಳೂರು, ಸೆ. 15: ಜಾಗತಿಕವಾಗಿ ಐಟಿ -ಬಿಟಿ ಕಂಪನಿಗಳ ಆರ್ಥಿಕ ಪ್ರಗತಿ ಸುಸ್ಥಿತಿಯಲ್ಲಿಲ್ಲ ಹಾಗಂತ ಪೂರ್ಣಪ್ರಮಾಣದಲ್ಲಿ ಉದ್ಯೋಗ ಕಡಿತ, ಪಿಂಕ್ ಸ್ಲಿಪ್ ವಿತರಣೆ ಆರಂಭವಾಗಿಲ್ಲ. ಆದರೆ, ದೊಡ್ಡ ದೊಡ್ಡ ಕಂಪನಿಗಳಿಂದ ಪ್ರಾಜೆಕ್ಟ್ ಸ್ಥಗಿತ, ತಕ್ಷಣವೇ ಉದ್ಯೋಗಿಗಳನ್ನು ಮನೆಗೆ ಕಳಿಸುವ ಪ್ರಕ್ರಿಯೆ ಆರಂಭವಾಗಿದೆ. ತನ್ನ ಕ್ಲೈಂಟ್ ಮೈಕ್ರೋಸಾಫ್ಟ್ ಸೂಚನೆಯಂತೆ ಪ್ರಮುಖ ಐಟಿ ಕಂಪನಿ ಎಚ್‌ಸಿಎಲ್ ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳಿಸಿದೆ.

ಜಾಗತಿಕವಾಗಿ 300ಕ್ಕೂ ಅಧಿಕ ಮಂದಿ ಟೆಕ್ಕಿಗಳ ಉದ್ಯೋಗ ಕಡಿತವಾಗಿರುವುದನ್ನು ಎಚ್‌ಸಿಎಲ್ ಟೆಕ್ನಾಲಜೀಸ್ ದೃಢಪಡಿಸಿದೆ. ಕ್ಲೈಂಟ್ ಮೈಕ್ರೋಸಾಫ್ಟ್ ಸಂಸ್ಥೆ ನ್ಯೂಸ್ ಪ್ರಾಜೆಕ್ಟ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಎಚ್‌ಸಿಎಲ್ ಉದ್ಯೊಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಭಾರತ, ಗ್ವಾಟೆಮಾಲಾ ಹಾಗೂ ಫಿಲಿಪೈನ್ಸ್ ದೇಶಗಳಲ್ಲಿನ ಉದ್ಯೋಗಿಗಳ ಉದ್ಯೋಗ ಕಡಿತವಾಗಿದೆ.

ಕಳೆದ ವಾರ ನಡೆದ 'ಟೌನ್ ಹಾಲ್' ಸಭೆ ಬಳಿಕ ಎಂಎಸ್ಎನ್ ಪ್ರಾಜೆಕ್ಟ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಕ್ಲೈಂಟ್ ಅಣತಿಯಂತೆ ಈ ನಿರ್ಧಾರ ಕೈಗೊಂಡಿರುವ ಬಗ್ಗೆ ತಿಳಿಸಲಾಗಿದೆ. ಉದ್ಯೋಗ ಕಳೆದುಕೊಂಡವರಿಗೆ ಭತ್ಯೆ ಸಹಿತ ವೇತನದ ಪೂರ್ಣ ಪರಿಹಾರ ಮೊತ್ತ ಕೈ ಸೇರಲಿದ್ದು, ಸೆಪ್ಟೆಂಬರ್ 30 ಉದ್ಯೋಗ ಅವಧಿಯ ಕೊನೆ ದಿನವಾಗಲಿದೆ ಎಂದು ಸಂಸ್ಥೆ ಹೇಳಿದೆ.

HCL Tech lays off over 350 globally working on Microsoft projects

ಜಾಗತಿಕವಾಗಿ ಆರ್ಥಿಕ ಅಸಮತೋಲನದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಪ್ರಮುಖ ಐಟಿ ಕಂಪನಿಗಳು ಉದ್ಯೋಗಿಗಳಿಗೆ ಕಾಲ ಕಾಲಕ್ಕೆ ನೀಡುವ ಬೋನಸ್, ಭತ್ಯೆ ತಡೆ ಹಿಡಿಯಲು ಮುಂದಾಗಿರುವುದು, ಸಂಬಳ ಕಡಿತ, ಉದ್ಯೋಗ ಕಡಿತಕ್ಕೆ ಮುಂದಾಗಿರುವ ಸುದ್ದಿ ಕಳೆದ ಒಂದು ತಿಂಗಳಿನಿಂದ ಕೇಳಿ ಬರುತ್ತಿದೆ.

2022ರಲ್ಲಿ 22,000 ಫ್ರೆಶರ್‌ಗಳ ನೇಮಕಕ್ಕೆ ಮುಂದಾದ HCL ಟೆಕ್ನಾಲಜೀಸ್2022ರಲ್ಲಿ 22,000 ಫ್ರೆಶರ್‌ಗಳ ನೇಮಕಕ್ಕೆ ಮುಂದಾದ HCL ಟೆಕ್ನಾಲಜೀಸ್

PwC 'Pulse: Managing business risks in 2022' ಇತ್ತೀಚಿನ ಸಮೀಕ್ಷೆಯ ಪ್ರಕಾರ, ಯುಎಸ್‌ನಲ್ಲಿ, 50% ಮಂದಿ ತಮ್ಮ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದ್ದಾರೆ, ಆದರೆ ಪ್ರಮುಖ ಉದ್ಯಮಿಗಳು ಪ್ರತಿಭೆಯನ್ನು ನೇಮಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಬಗ್ಗೆ ಕಾಳಜಿ ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮೈಕ್ರೋಸಾಫ್ಟ್ ಮತ್ತು ಮೆಟಾ (ಹಿಂದೆ ಫೇಸ್‌ಬುಕ್) ನಂತಹ ಬಿಗ್ ಟೆಕ್ ಕಂಪನಿಗಳು ಸೇರಿದಂತೆ ಯುಎಸ್‌ನಲ್ಲಿ ಜುಲೈವರೆಗೆ 32,000 ಕ್ಕೂ ಹೆಚ್ಚು ಟೆಕ್ ಕೆಲಸಗಾರರನ್ನು ವಜಾಗೊಳಿಸಲಾಗಿದೆ ಮತ್ತು ಬೃಹತ್ ಸ್ಟಾಕ್ ಮಾರಾಟವನ್ನು ಕಂಡ ಟೆಕ್ ವಲಯಕ್ಕೆ ಇನ್ನೂ ಆರ್ಥಿಕ ಬಿಕ್ಕಟ್ಟು ತಟ್ಟಿಲ್ಲ.

ಭಾರತದಲ್ಲಿ, ಕೋವಿಡ್19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ 25,000 ಕ್ಕೂ ಹೆಚ್ಚು ಸ್ಟಾರ್ಟಪ್ ಸಿಬ್ಬಂದಿಗಳು ಕೆಲಸ ಕಳೆದುಕೊಂಡಿದ್ದಾರೆ - ಮತ್ತು ಈ ವರ್ಷ 12,000 ಕ್ಕೂ ಹೆಚ್ಚು ಕೆಲಸದಿಂದ ವಜಾ ಮಾಡಲಾಗಿದೆ.

English summary
Amid harsh global market conditions, tech giant HCL Technologies has reportedly laid off 350 employees globally, including in India, Guatemala and the Philippines, who were working on a Microsoft news project, media reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X