ಹಾವೇರಿ ಜಿಲ್ಲಾ ಪಂಚಾಯಿತಿ ನೇಮಕಾತಿ; ವಿವಿಧ ಹುದ್ದೆಗೆ ಅರ್ಜಿ ಹಾಕಿ

ಹಾವೇರಿ, ಆಗಸ್ಟ್ 02; ಹಾವೇರಿ ಜಿಲ್ಲಾ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆಗಸ್ಟ್ 12ರೊಳಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕರು (ಅರಣ್ಯ/ ಕೃಷಿ/ ತೋಟಗಾರಿಕೆ) ಮತ್ತು ಬಿ. ಎಫ್‌. ಟಿ. ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಮೂದಿಸಿದ ದಾಖಲೆಗಳ ಮೂಲಪ್ರತಿಗಳನ್ನು ದಾಖಲಾತಿ ಪರಿಶೀಲನೆ ವೇಳೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಮೂಲ ದಾಖಲೆಗಳನ್ನು ಪರಿಶೀಲಿಸಲು ನಿಗದಿಪಡಿಸಿರುವ ದಿನಾಂಕ 24/8/2021ರಂದು ಸಂಜೆ 5 ಗಂಟೆಯೊಳಗೆ ಹಾಜರಾಗುವ ಅಭ್ಯರ್ಥಿಗಳ ದಾಖಲೆಗಳನ್ನು ಮಾತ್ರ ಪರಿಶೀಲನೆ ನಡೆಸಲಾಗುತ್ತದೆ.

Haveri Zilla Panchayat Recruitment Apply For Various Post

ಆಯ್ಕೆಗೊಂಡ ಅಭ್ಯರ್ಥಿ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ನಿಯೋಜನೆ ಮಾಡಿದರೂ ಕೆಲಸ ಮಾಡಬೇಕು. ಹುದ್ದೆಗೆ ಆಯ್ಕೆ ಮಾಡಲಾದ ಅಭ್ಯರ್ಥಿಗಳು ನಿಯೋಜನೆ ಮಾಡಿದ ಸ್ಥಳಕ್ಕೆ ಒಂದು ವಾರದೊಳಗೆ ಹಾಜರಾಗದಿದ್ದಲ್ಲಿ, ಅರ್ಹತಾ ಪಟ್ಟಿಯಲ್ಲಿನ ನಂತರದ ಅಭ್ಯರ್ಥಿಯನ್ನು ಆಯ್ಕೆಗೆ ಪರಿಗಣನೆ ಮಾಡಲಾಗುತ್ತದೆ.

ಹುದ್ದೆಗಳ ವಿವರಗಳು; ತಾಂತ್ರಿಕ ಸಹಾಯಕರು (ಅರಣ್ಯ) 3 ಹುದ್ದೆಗಳು. ಕನಿಷ್ಠ ವಿದ್ಯಾರ್ಹತೆ ಬಿಎಸ್‌ಸಿ ಫಾರೆಸ್ಟರಿ. ಅಪೇಕ್ಷಣೀಯ ವಿದ್ಯಾರ್ಹತೆ ಎಂ. ಎಸ್‌. ಸಿ. ಫಾರೆಸ್ಟರಿ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ. ವಯೋಮಿತಿ 21-40 ವರ್ಷಗಳು. ವೇತನ 24,000 ರೂ. ಹಾಗೂ ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ.ನಂತೆ ಮಾಸಿಕ ಗರಿಷ್ಠ 1500 ರೂ.ಗಳು.

ತಾಂತ್ರಿಕ ಸಹಾಯಕರು (ಕೃಷಿ) 3 ಹುದ್ದೆಗಳು. ಕನಿಷ್ಠ ವಿದ್ಯಾರ್ಹತೆ ಬಿಎಸ್‌ಸಿ ಅಗ್ರಿ. ಅಪೇಕ್ಷಣೀಯ ವಿದ್ಯಾರ್ಹತೆ ಎಂ. ಎಸ್‌. ಸಿ. ಅಗ್ರಿ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ. ವಯೋಮಿತಿ 21-40 ವರ್ಷಗಳು. ವೇತನ 24,000 ರೂ. ಹಾಗೂ ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ.ನಂತೆ ಮಾಸಿಕ ಗರಿಷ್ಠ 1500 ರೂ.ಗಳು.

ತಾಂತ್ರಿಕ ಸಹಾಯಕರು (ತೋಟಗಾರಿಕೆ) 8 ಹುದ್ದೆಗಳು. ಕನಿಷ್ಠ ವಿದ್ಯಾರ್ಹತೆ ಬಿಎಸ್‌ಸಿ ತೋಟಗಾರಿಕೆ. ಅಪೇಕ್ಷಣೀಯ ವಿದ್ಯಾರ್ಹತೆ ಎಂ. ಎಸ್‌. ಸಿ. ತೋಟಗಾರಿಕೆ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ. ವಯೋಮಿತಿ 21-40 ವರ್ಷಗಳು. ವೇತನ 24,000 ರೂ. ಹಾಗೂ ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ.ನಂತೆ ಮಾಸಿಕ ಗರಿಷ್ಠ 1500 ರೂ.ಗಳು.

ಬಿ. ಟಿ. ಎಫ್ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ. ಒಟ್ಟು ಹುದ್ದೆಗಳು 8. ವೇತನ 12,000 ರೂ. ಮಾಸಿಕ. ಅಭ್ಯರ್ಥಿಗಳಿಗೆ ವಯೋಮಿತಿ 18-45 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ haveri.nic.in

ದಾಖಲಾತಿಗಳ ಪರಿಶೀಲನೆಗೆ ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ. ಮೆರಿಟ್ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಸೇವೆಯನ್ನು ಜಿಲ್ಲೆಯಲ್ಲಿ ಅನುಮೋದಿತ ಮಾನವ ಸಂಪನ್ಮೂಲ ಸಂಸ್ಥೆಗಳ ಮುಖಾಂತರ ಪಡೆದುಕೊಳ್ಳಲಾಗುತ್ತದೆ.

ಹೊರಗುತ್ತಿಗೆ ಸೇವಾ ಅವಧಿಯೂ 11 ತಿಂಗಳು ಆಗಿದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಪರಿಶೀಲನೆ ನಡೆಸಿ ಹೊರಗುತ್ತಿಗೆ ಸೇವೆ ಮುಂದುವರೆಸುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನೇಮಕಗೊಂಡ ಅಭ್ಯರ್ಥಿಗಳು ವಾರ್ಷಿಕ 12 ದಿನಗಳ ಸಾಂದರ್ಭಿಕ ರಜೆಯನ್ನು ಪಡೆಯಬಹುದಾಗಿದೆ. ಮಹಿಳೆಯರು ಹೆರಿಗೆ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಮೆರಿಟ್ ಮೇಲೆ ಆಯ್ಕೆಯಾದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಂತಹ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಬಿ. ಎಫ್‌. ಟಿ. ಹುದ್ದೆಯ ಆಯ್ಕೆಗೆ ಅಭ್ಯರ್ಥಿ ನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರನಾಗಿರಬೇಕು. ಕನಿಷ್ಟ 2 ವರ್ಷದಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಂತೆ ಯೋಜನೆಯಡಿ ಕೂಲಿ ಕೆಲಸವನ್ನು ಮಾಡಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+