HAL Jobs: ಬೆಂಗಳೂರಿನಲ್ಲೇ ಕೈತುಂಬ ಸಂಬಳದ ಉದ್ಯೋಗ, ಅರ್ಹರು ಕೂಡಲೇ ಅರ್ಜಿ ಹಾಕಿ

ಬೆಂಗಳೂರು, ಆಗಸ್ಟ್ 25: ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​(HAL) ಸಂಸ್ಥೆ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹರಿಂದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​(HAL) ಸಂಸ್ಥೆಯಲ್ಲಿ ಒಂದು ಯೋಗ ಥೆರಪಿಸ್ಟ್ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 1ರ ಒಳಗಾಗಿ ಆಫ್​ಲೈನ್ /ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮೊದಲು ಆಸಕ್ತರು ನೇಮಕಾತಿಯ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

HAL Recruitment 2023: HAL Invite Applications For One Empty Post By Eligibles

ನೇಮಕಾತಿ ಪ್ರಕ್ರಿಯೆ ವಿವರ

ಸಂಸ್ಥೆ - HA

ಹುದ್ದೆ ಹೆಸರು -ಯೋಗ ಥೆರಪಿಸ್ಟ್

ಖಾಲಿ ಹುದ್ದೆ ಸಂಖ್ಯೆ - 1

ಉದ್ಯೋಗದ ಸ್ಥಳ -ಬೆಂಗಳೂರು

ವೇತನ- ನಿಯಮಾನುಸಾರ

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಯೋಗ ಥೆರಪಿಯಲ್ಲಿ MSc ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ತಿಳಿಸಿದೆ.

HAL Recruitment 2023: HAL Invite Applications For One Empty Post By Eligibles

ವಯಸ್ಸಿನ ಮಿತಿ, ಅನುಭವ

ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ,

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಇದೇ ತಿಂಗಳ ಆಗಸ್ಟ್ 1ಕ್ಕೆ ಗರಿಷ್ಠ 40 ವರ್ಷ ವಯಸ್ಸು ದಾಟಿರಬಾರದು. ಆಯಾ ಅಭ್ಯರ್ಥಿಗಳ ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಇನ್ನೂ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ವೇತನ ನಿಗದಿಪಡಿಸಲಾಗಿಲ್ಲ ಎಂದು ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಹೇಳಿದೆ.

ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ

ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರಿಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣ ಆಗುವವರಿಗೆ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲಾತಿಗಳ ಸಮೇತ ಮುಖ್ಯ ವ್ಯವಸ್ಥಾಪಕರು (HR), ಕೈಗಾರಿಕಾ ಆರೋಗ್ಯ ಕೇಂದ್ರ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಬೆಂಗಳೂರು ಕಾಂಪ್ಲೆಕ್ಸ್), ಸುರಂಜಂದಾಸ್ ರಸ್ತೆ, (ಹಳೆಯ ವಿಮಾನ ನಿಲ್ದಾಣದ ಹತ್ತಿರ), ಬೆಂಗಳೂರು - 560017 ಇಲ್ಲಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕಳೆದ ಆಗಸ್ಟ್ 18ರಿಂದ ಆರಂಭವಾಗಿದ್ದು, ಸೆಪ್ಟಂಬರ್ 01ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22323005/22328023 ಗೆ ಕರೆ ಮಾಡಬಹುದು. ಇಲ್ಲವೇ ಇ ಮೇಲ್ ಐಡಿ [email protected] ಗೆ ಸಂದೇಶ ಕಳಹಿಸಬಹುದು ಎಂದು ಎಚ್‌ಎಎಲ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+