10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಎಚ್‌ಎಎಲ್
ಬೆಂಗಳೂರು, ಸೆಪ್ಟೆಂಬರ್ 27 : ಎಚ್‌ಎಎಲ್ ಟೆಕ್ನಿಕಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 10 ಅಕ್ಟೋಬರ್ 2018 ಕೊನೆಯ ದಿನವಾಗಿದೆ.
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) 10 ಟೆಕ್ನಿಶಿಯನ್ (ಫಿಟ್ಟರ್, ಟರ್ನರ್, ಎಕ್ಸ್‌ಎಸ್‌ಎಂ) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದವರು ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಮಾಡಬೇಕು.
ಟೆಕ್ನಿಶಿಯನ್ (ಫಿಟ್ಟರ್, ಟರ್ನರ್) ಹುದ್ದೆಗೆ ಅರ್ಜಿ ಸಲ್ಲಿಸುವವರು ರೆಗ್ಯುಲರ್/ಫುಲ್ ಟೈಂ ಐಟಿಐ+ಎನ್‌ಎಸಿ ಅಥವ ಐಟಿಐ+ಎನ್‌ಸಿಟಿವಿಟಿ ಯನ್ನು 10ನೇ ತರಗತಿ ಬಳಿಕ ಟ್ರೇಡ್, ಫಿಟ್ಟರ್ ಅಥವ ಟರ್ನರ್‌ನಲ್ಲಿ ಪೂರ್ಣಗೊಳಿಸಿರಬೇಕು.

ಟೆಕ್ನಿಶಿಯನ್ (ಎಕ್ಸ್‌ಎಸ್‌ಎಂ) ಹುದ್ದೆಗೆ ಅರ್ಜಿ ಹಾಕುವವರು ಡಿಪ್ಲೊಮಾ ಇನ್ ಇಂಜಿನಿಯರಿಂಗ್/ಟೆಕ್ನಾಲಿಜಿಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ
* ಟೆಕ್ನಿಶಿಯನ್ (ಫಿಟ್ಟರ್, ಟರ್ನರ್) 10750-27670 ರೂ.ಗಳು.
* ಟೆಕ್ನಿಶಿಯನ್ (ಎಕ್ಸ್‌ಎಸ್‌ಎಂ) 11050-28970 ರೂ.ಗಳು
ವಯೋಮಿತಿ
* ಟೆಕ್ನಿಶಿಯನ್ (ಫಿಟ್ಟರ್, ಟರ್ನರ್) 38 ವರ್ಷ
* ಟೆಕ್ನಿಶಿಯನ್ (ಎಕ್ಸ್‌ಎಸ್‌ಎಂ) 28 ವರ್ಷಗಳು (1 ಆಗಸ್ಟ್ 2018ಕ್ಕೆ ಅನ್ವಯವಾಗುವಂತೆ)
ಲಿಖಿತ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications