ಎಚ್ಎಎಲ್ ನಲ್ಲಿ 14ಕ್ಕೂ ಅಧಿಕ ವಿವಿಧ ಹುದ್ದೆಗಳಿವೆ
ಬೆಂಗಳೂರು, ಮಾರ್ಚ್ 01 : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) 14 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 7, 2018.
ಎಚ್‌ಎಎಲ್ ನರ್ಸರಿ ಟೀಚರ್ 7, ಆಯಾ 3 ಹಾಗೂ ಇನ್ನಿತರ ಹುದ್ದೆಗಳು ಸೇರಿ 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗ ಸ್ಥಳ ಬೆಂಗಳೂರು ಆಗಿರುತ್ತದೆ.

ಪ್ರಮುಖ ವಿವರ
* ಉದ್ಯೋಗ ಸಂಸ್ಥೆ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್)
* ಹುದ್ದೆಗಳು : ಪ್ರಾಥಮಿಕ ಶಾಲೆ ಟೀಚರ್, ಆಯಾ
* ಒಟ್ಟು ಹುದ್ದೆಗಳು: 14
* ಉದ್ಯೋಗ ಸ್ಥಳ : ಬೆಂಗಳೂರು
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 7/03/2018
ವಿದ್ಯಾರ್ಹತೆ : ಪ್ರಾಥಮಿಕ ಶಾಲೆ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (ಬಿ.ಎ, ಬಿ. ಎಡ್) ಹೊಂದಿರಬೇಕು. ಆಯಾ ಹುದ್ದೆಗೆ ಅರ್ಜಿ ಹಾಕುವವರು 10ನೇ ತರಗತಿ ಪಾಸ್ ಅಥವಾ ಮಿಡ್ಲ್ ಸ್ಕೂಲ್ ತನಕವಾದರೂ ವ್ಯಾಸಂಗ ಮಾಡಿರಬೇಕು.
ವೇತನ ಶ್ರೇಣಿ: ಟೀಚರ್ ಹುದ್ದೆ : 9,300 ತಿಂದ 34, 800/.
ಆಯಾ : 10,000/
ವಯೋಮಿತಿ : 45 ವರ್ಷಗಳು 1/6/2018ಕ್ಕೆ ಅನ್ವಯವಾಗುವಂತೆ.
ಹೆಚ್ಚಿನ ವಿವರಗಳು, ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications