ಎಚ್ ಎಎಲ್ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By: Ramesh
Subscribe to Oneindia Kannada

ಬೆಂಗಳೂರು, ಜನವರಿ. 09 : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ(ಎಚ್ ಎಎಲ್) ಖಾಲಿ ಇರುವ 12 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 15ರೊಳಗೆ ಅರ್ಜಿ ಸಲ್ಲಿಬಹುದು.

ಹುದ್ದೆ: ಟೆಕ್ನಿಷಿಯನ್

ಒಟ್ಟು ಹುದ್ದೆಗಳು: 12

ವೇತನ: 21650 ತಿಂಗಳಿಗೆ

ಹುದ್ದೆ ಸ್ಥಳ : ಕರ್ನಾಟಕ

ವಯೋಮಿತಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಆಡಳಿತದ ನಿಯಮಗಳ ಪ್ರಕಾರ.[ಎಸ್ ಬಿಐನಲ್ಲಿ ಮುಖ್ಯ ಮ್ಯಾನೇಜರ್ ಹುದ್ದೆಗಳಿವೆ, ಅರ್ಜಿ ಹಾಕಿ]

HAL Recruitment 2017 Apply Online Aircraft Technician Posts

ವಿದ್ಯಾರ್ಹತೆ: ಅಭ್ಯರ್ಥಿಗಳು ಡಿಪ್ಲೋಮಾ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ ಎರೋನಾಟಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದುಕೊಂಡಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವಯಕ್ತಿಕ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ: ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳ ಮೇಲೆ ಸ್ವಯಂ ದೃಢಿಕರಿಸಿ ಜತೆಗೆ ಇತ್ತೀಚೆಗಿನ ಭಾವ ಚಿತ್ರದೊಂದಿಗೆ ಅರ್ಜಿಯನ್ನು ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಸುರಂಜನ್ ದಾಸ್ ರಸ್ತೆ, ವಿಮಾನಪುರ ರಸ್ತೆ, ಬೆಂಗಳೂರು. ಈ ವಿಳಾಸಕ್ಕೆ ಕಳುಹಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindustan Aeronautics Limited (HAL) invites application for the position of 12 Aircraft Technician vacancies in Hindustan Aeronautics Limited (HAL). Apply before 15th January 2017.
Please Wait while comments are loading...